ಮೂಡುಬಿದಿರೆ, ನ 07 (DaijiworldNews/AK) : ಬೈಕ್ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಮೂಡುಬಿದಿರೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನ.7ರ ಮಂಗಳವಾರ ಬೆಳಗ್ಗೆ ಮಾರ್ಪಾಡಿ ಗ್ರಾಮದ ಸಾವಿರ ಕಂಬದ ಬಸದಿಯ ಸಮೀಪದ ಕೊಂಡೆ ಬೀದಿಯಲ್ಲಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆಯಲಾಯಿತು.
ಬಂಧಿತರನ್ನು ಮೂಡುಬಿದಿರೆ ತಾಲೂಕಿನ ಇಡಾ ಕೋಟೆಬಾಗಿಲು ನಿವಾಸಿ ಸೈಯದ್ ಜಾಕೀರ್ (20) ಮತ್ತು ಕೋಟೆಬಾಗಿಲು ಗ್ರಾಮದ ದರ್ಗಾ ರಸ್ತೆ ನಿವಾಸಿ ಮೊಹಮ್ಮದ್ ಶಹೀಂ (24) ಎಂದು ಗುರುತಿಸಲಾಗಿದೆ
ನಂತರ ವಿಚಾರಣೆಯ ವೇಳೆ ಆರೋಪಿಗಳ ಬಳಿಯಿದ್ದ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಬೈಕ್ನ್ನು ಅಕ್ಟೋಬರ್ ರಂದು ಮಧ್ಯರಾತ್ರಿಯ ಸಮಯದಲ್ಲಿ ಕಳ್ಳತನ ಮಾಡಲಾಗಿದೆ ಎಂದು ಆರೋಪಿಗಳು ಬಾಯಿಬಿಟ್ಟಿದ್ದಾರೆ.ಜೈನಪೇಟೆಯ ಬಡಗ ಬಸದಿಯ ಎದುರು ಇರುವ ದೇವಿ ಕೃಪಾ ಅಪಾರ್ಟ್ಮೆಂಟ್ನ ಪಾರ್ಕಿಂಗ್ ಪ್ರದೇಶದಲ್ಲಿ ಕಳ್ಳತನ ನಡೆದಿದೆ.
ಆರೋಪಿಗಳು ಅದೇ ಮಾದರಿಯ ಮತ್ತೊಂದು ಮೋಟಾರ್ಸೈಕಲ್ ಅನ್ನು ಸಹ ಕದ್ದೊಯ್ದಿದ್ದಾರೆ ಎಂದು ಹೆಚ್ಚಿನ ತನಿಖೆಯಿಂದ ತಿಳಿದುಬಂದಿದೆ. ಮಾರ್ಪಾಡಿ ಗ್ರಾಮದಲ್ಲಿರುವ ಎವರ್ ಪ್ರೈಸ್ ರೆಸಿಡೆನ್ಸ್ ಅಪಾರ್ಟ್ಮೆಂಟ್ನ ಪಾರ್ಕಿಂಗ್ ಪ್ರದೇಶದಲ್ಲಿ ಎರಡನೇ ಕಳ್ಳತನ ನಡೆದಿದೆ.
ಬೈಕ್ನ್ನು ಪೇಪರ್ ಮಿಲ್ ಬಳಿಯ ಕೀರ್ತಿನಗರ ಕ್ರಾಸ್ನಲ್ಲಿ ಪೊದೆಗಳಲ್ಲಿ ಬಚ್ಚಿಟ್ಟಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಪೊಲೀಸರು ಬೈಕನ್ನೂ ಯಶಸ್ವಿಯಾಗಿ ವಶಪಡಿಸಿಕೊಂಡಿದ್ದಾರೆ. ಒಟ್ಟು ಮೌಲ್ಯ 3 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾರ್ಗದರ್ಶನದಲ್ಲಿ ಡಿಸಿಪಿಗಳಾದ ಸಿದ್ಧಾರ್ಥ ಗೋಯಲ್ ಮತ್ತು ದಿನೇಶ್ ಕುಮಾರ್ ನೇತೃತ್ವದಲ್ಲಿ ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಮೂಡುಬಿದಿರೆ ಪೊಲೀಸರ ತಂಡದಲ್ಲಿ ಇನ್ಸ್ಪೆಕ್ಟರ್ ಸಂದೇಶ್ ಪಿ ಜಿ, ಠಾಣೆಯ ಅಪರಾಧ ದಳದ ಸದಸ್ಯರಾದ ಮೊಹಮ್ಮದ್ ಇಕ್ಬಾಲ್, ಮೊಹಮ್ಮದ್ ಹುಸೇನ್, ಅಕೀಲ್ ಅಹಮದ್, ನಾಗರಾಜ್, ವೆಂಕಟೇಶ್, ಚಂದ್ರಹಾಸ ರೈ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು.