ಮಂಗಳೂರು , ನ 7 (DaijiworldNews/RA): ನಗರದ ಹೊರವಲಯದ ತೊಕ್ಕೊಟ್ಟು ಒಳಪೇಟೆಯ ರೈಲ್ವೇ ಟ್ರಾಕ್ ಬಳಿ ಮಟ್ಕಾ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ನಾಲ್ಕು ಮಂದಿಯನ್ನು ಅ.6 ರಂದು ಉಳ್ಳಾಲ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಉಳ್ಳಾಲಬೈಲ್ ನ ನಿವಾಸಿ ಮಧುಸೂದನ್ (50), ತೌಡುಗೋಳಿ ಕ್ರಾಸ್ನ ಮುಸ್ತಫಾ (50), ಪೆರ್ಮನ್ನೂರು ಗ್ರಾಮದ ಫಕೀರಪ್ಪ (38), ದೇರಳಕಟ್ಟೆಯ ಖಾದಿರ್ ಮೊಯ್ದಿನ್ (65) ಎಂಬವರನ್ನು ಬಂಧಿಸಲಾಗಿದೆ.
ಆರೋಪಿಗಳಿಂದ ಮಟ್ಕಾ ಚೀಟಿ, ನಗದು ಹಣ 3,260 ರೂಪಾಯಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.