ಮಂಗಳೂರು, ನ. 6 (DaijiworldNews/SK): ಭಾರತೀಯ ಜನತಾ ಪಕ್ಷ ರಾಜ್ಯ ಸರಕಾರದ ಸಾಧನೆ ಸಹಿಸದೆ ಪಕ್ಷದ ಬಗ್ಗೆ ಕೆಟ್ಟ ಅಭಿಪ್ರಾಯ ಬರುವಂತೆ ಹೇಳಿಕೆ ನೀಡುತ್ತಿದ್ದಾರೆ. ಇವರ ಅಪಪ್ರಚಾರದ ಕುತಂತ್ರವನ್ನು ಜನ ಅರಿತು ಕೊಳ್ಳುತ್ತಾರೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , ಪ್ರಧಾನಿ ಮೋದಿಯವರು ಕೂಡಾ ಸರ್ಕಾರದ ಬಗ್ಗೆ ಇಲ್ಲಸಲ್ಲದ ಆರೋಪ ಮಾಡ್ತಾ ಇದ್ದಾರೆ. ಕಳೆದ ಬಾರಿ ಕಾಂಗ್ರೆಸ್ ಸರ್ಕಾರ ಎಲ್ಲ ನಿಗಮದ ಸಾಲವನ್ನು ಮನ್ನಾ ಮಾಡಿದೆ. ಕೃಷಿ ಪಂಪ್ ಸೆಟ್ ಕೂಡ ಉಚಿತ ಮಾಡುವುದರ ಜೊತೆಗೆ ಬಡವರಿಗೆ ಬೇಕಾದ ಕಾರ್ಯಕ್ರಮ ಮಾಡಿದೆ ಎಂದರು.
ಇನ್ನು ಸರಕಾರದಿಂದ ಕಾಮಗಾರಿಗೆ ಅನುದಾನ ಬಿಡುಗಡೆ ಆಗ್ತ ಇಲ್ಲ ಎಂಬ ಆರೋಪ ಕೂಡ ಕೇಳಿ ಬರುತ್ತಿದ್ದು, ಸರ್ಕಾರ ಅನುದಾನ ಬಿಡುಗಡೆ ಮಾಡಲ್ಲ ಎಂದು ಯಾವತ್ತು ಹೇಳಿಲ್ಲ ಎಂದು ಹೇಳಿದರು.
ಆದರೆ ಮಂಜೂರಾತಿ ಇಲ್ಲದೆ ಅಡ್ವಾನ್ಸ್ ಕೆಲಸ ಮಾಡಿದ್ದಾರೆ. ಇದರ ತನಿಖೆ ಆಗ್ತಾ ಇದೆ. ಈ ಬಗ್ಗೆ ತನಿಖೆ ಮುಗಿದ್ರೆ ಎಲ್ಲಾ ಅನುದಾನ ಕೊಡ್ತಾರೆ ಎಂದರು.
ಇನ್ನು ಜಿಲ್ಲೆಯಲ್ಲಿನ ಮರಳು ಸಮಸ್ಯೆ ವಿಚಾರವಾಗಿ ಮಾತನಾಡಿದ ಅವರು, ಅಕ್ರಮ ಮರಳುಗಾರಿಕೆ ಶಾಸಕರ ಕುಮ್ಮಕ್ಕಿನಿಂದ ಆಗ್ತಾ ಇತ್ತು. ಈಗ ಆಗ್ತಾ ಇಲ್ಲ, ಸಾಕ್ಷಿ ಆಧಾರ ಸಹಿತ, ಅಕ್ರಮ ಮರಳುಗಾರಿಕೆ ತಡೆದಿದ್ದೇವೆ ಎಂದರು.
ನಾಲ್ಕು ವರ್ಷದ ಹಿಂದಿನಿಂದ ಪರ್ಮಿಟ್ ಪಡೆದವರು ವೇವ್ ಬ್ರಿಜ್ ಮಾಡಿಲ್ಲ. ನಾಲ್ಕು ವರ್ಷದಿಂದ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದರು.