ಕಾಸರಗೋಡು,ನ 04 (DaijiworldNews/AK): ನವ ವಿವಾಹಿತೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಪೆರ್ಲ ದಲ್ಲಿ ನಡೆದಿದೆ. ಪೆರ್ಲ ಉಕ್ಕಿನಡ್ಕ ದ ಮುಹಮ್ಮದ್ ರವರ ಪುತ್ರಿ ಉಮೈರಾ ಬಾನು (22) ಮೃತ ಪಟ್ಟವರು.
ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಮೃತ ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಗಲ್ಫ್ ಉದ್ಯೋಗಿ ಆಗಿರುವ ಉಕ್ಕಿ ನಡ್ಕ ದ ತಾಜುದ್ದೀನ್ ಜೊತೆ 19 ದಿನ ಗಳ ಹಿಂದೆ ವಿವಾಹವಾಗಿತ್ತು.
ಕುಟುಂಬಸ್ಥರು ಶುಕ್ರವಾರ ಬೆಳಿಗ್ಗೆ ಸಂಬಂಧಿಕರ ಮನೆಗೆ ತೆರಳಿದ್ದರು. ತಾಜುದ್ದೀನ್ ಮನೆಯಿಂದ ಹೊರಗಡೆ ತೆರಳಿದ್ದರು ಮನೆಯಲ್ಲಿ ಉಮೈರಾ ಮಧ್ಯಾಹ್ನದ ವೇಳೆ ತಾಜುದ್ದೀನ್ ಮನೆಗೆ ಮರಳಿದಾಗ ಬಾಗಿಲು ಒಳಗಡೆ ಯಿಂದ ಚಿಲಕ ಹಾಕಲಾಗಿತ್ತು.
ತುಂಬಾ ಹೊತ್ತು ಕಳೆದರೂ ಬಾಗಿಲು ತೆರೆಯದ ಹಿನ್ನಲೆ ಬಾಗಿಲು ಮುರಿದು ಒಳಗಡೆ ತೆರಳಿದಾಗ ಫ್ಯಾನ್ ಗೆ ನೇಣು ಬಿಗಿದು ಮೃತ ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕೂಡಲೇ ಸಮೀಪದ ಆಸ್ಪತ್ರೆ ಗೆ ಸಾಗಿಸಿದರು ಜೀವ ಉಳಿಸಲಾಗಲಿಲ್ಲ. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ . ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿ ಕೊಂಡಿದ್ದಾರೆ