ಕಾಸರಗೋಡು, ನ 04 (DaijiworldNews/AK): ಮೋರಿ ನಿರ್ಮಿಸಲು ರಸ್ತೆ ಮಧ್ಯೆ ತೋಡಲಾಗಿದ್ದ ಹೊಂಡಕ್ಕೆ ಬಿದ್ದು ಬಾರ್ ಕಾರ್ಮಿಕನೋರ್ವ ಮೃತ ಪಟ್ಟ ಘಟನೆ ಕಾಙಂಗಾಡ್ ಸಮೀಪದ ಕೊವ್ವಲ್ ಪಳ್ಳಿ ಎಂಬಲ್ಲಿ ನಡೆದಿದೆ.
ಅಂಬಲತ್ತರ ಪಾರಪಳ್ಳಿ ಯ ನಿದೀಶ್ (40) ಮೃತ ಪಟ್ಟವರು.ಅಲಾಮಿಪಳ್ಳಿ ಯಲ್ಲಿರುವ ಬಾರ್ ನ ಕ್ಲೀನಿಂಗ್ ಕಾರ್ಮಿಕ ನಾಗಿದ್ದನು . ಶನಿವಾರ ಬೆಳಿಗ್ಗೆ ಹೊಂಡದಲ್ಲಿ ತುಂಬಿದ್ದ ನೀರಿನಲ್ಲಿ ಮುಳುಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ ಯಾಗಿದ್ದಾರೆ.
ರಾತ್ರಿ 11 ಗಂಟೆಗೆ ಕೆಲಸ ಮುಗಿಸಿ ಮನೆಗೆ ತೆರಳಿದ್ದರು. ತಡ ರಾತ್ರಿ ಯಾದರೂ ಮನೆಗೆ ಬರದೆ ಇದ್ದುದರಿಂದ ಮನೆಯವರು ಶೋಧ ನಡೆಸಿದ್ದು, ಈ ನಡುವೆ ಬೆಳಿಗ್ಗೆ ಮೃತ ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ . ಹೊಸದುರ್ಗ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ