ಉಡುಪಿ , ನ.02 (DaijiworldNews/AK): ವ್ಯವಹಾರವೊಂದು ನೂರಾರು ಜನರಿಗೆ ಉಪಯೋಗವಾಗುವ ಸಂಸ್ಥೆಯಾಗಿ ಬೆಳೆಯಬೇಕು. ಮಣಿಪಾಲ ಎನರ್ಜಿ ಮತ್ತು ಇನ್ಫ್ರಾಾಟೆಕ್ ಸಂಸ್ಥೆ ನಿರ್ಮಾಣ ವಲಯ, ಅಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಮೂಲಕ ನೂರಾರು ಜನರಿಗೆ ಉದ್ಯೋಗ ಅವಕಾಶ ನೀಡುವ ಉತ್ತಮ ವ್ಯವಹಾರ ಮಾಡುತ್ತಿದೆ ಎಂದು ಶ್ರೀ ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹೇಳಿದರು.
ಮಣಿಪಾಲ ಎನರ್ಜಿ ಮತ್ತು ಇನ್ಫ್ರಾಾಟೆಕ್ ಲಿಮಿಟೆಡ್ನ ನವೀಕೃತ ಕಟ್ಟಡವನ್ನು ಗುರುವಾರ ಉದ್ಘಾಾಟಿಸಿ ಆಶೀರ್ವಚನ ನೀಡಿದರು.
ಮಣಿಪಾಲವು ಸಾವಿರಾರು ಜನರಿಗೆ ಉದ್ಯೋಗ ನೀಡುವ ಪ್ರದೇಶವಾಗಿ ಗುರುತಿಸಿಕೊಂಡಿದೆ. ಮಣಿಪಾಲದಲ್ಲಿ ಉದ್ಯೋಗ ಸೃಷ್ಟಿ ಮತ್ತು ಅಭಿವೃದ್ಧಿಯ ಕೀರ್ತಿ ಪೈ ಕುಟುಂಬಕ್ಕೆ ಸಲ್ಲುತ್ತದೆ.
ಉದಯವಾಣಿ, ತರಂಗ ಮೂಲಕ ಸಾತ್ವಿಕ ವಿಚಾರವನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಎನರ್ಜಿ ಮತ್ತು ಇನ್ಫ್ರಾಾಟೆಕ್ ಲಿಮಿಟೆಡ್ ಸಂಸ್ಥೆ ಮತ್ತಷ್ಟು ಬೆಳೆಯಲಿ ಎಂದು ಅನುಗ್ರಹಿಸಿದರು.
ಮಣಿಪಾಲ್ ಟೆಕ್ನಾಾಲಜಿಸ್ ಸಂಸ್ಥೆಯ ಕಾರ್ಯನಿರ್ವಹಕ ಅಧ್ಯಕ್ಷ ಟಿ. ಗೌತಮ್ . ಪೈ ಅವರು ಮಾತನಾಡಿ, ಸಂಸ್ಥೆಯು ಹಲವಾರು ವರ್ಷಗಳಿಂದ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದೆ. ಗುಣಮಟ್ಟದ ಮೌಲ್ಯಯುತ ಕೆಲಸದ ಮೂಲಕ ವಿಶೇಷ ಮನ್ನಣೆ ಪಡೆದಿದೆ. ಸಂಸ್ಥೆಯು ಇನ್ನಷ್ಟು ಬೆಳವಣಿಗೆ ಹೊಂದಲಿ ಎಂದು ಆಶಿಸಿದರು.
ಮಣಿಪಾಲ ಮೀಡಿಯಾ ನೆಟ್ವರ್ಕ್ ಲಿಮಿಟೆಡ್ನ (ಎಂಎಂಎನ್ಎಲ್) ಕಾರ್ಯನಿರ್ವಾಹಕ ಅಧ್ಯಕ್ಷರಾದ ಟಿ. ಸತೀಶ್ ಯು. ಪೈ, ಎಂಎಂಎನ್ಎಲ್ನ ವನಿತಾ ಪೈ, ಮಣಿಪಾಲ ಎನರ್ಜಿ ಆ್ಯಂಡ್ ಇನ್ಫ್ರಾಾಟೆಕ್ನ ಎಂಡಿ ಮತ್ತು ಸಿಇಒ ಸಾಗರ್ ಮುಖೋಪಧ್ಯಾಾಯ, ಮಣಿಪಾಲ ಟೆಕ್ನಾಾಲಜೀಸ್ ಲಿ. ಸಿಇಒ ಮತ್ತು ಎಂಡಿ ಅಭಯ್ ಗುಪ್ತೆೆ ಅತಿಥಿಗಳಾಗಿದ್ದರು. ಮಣಿಪಾಲ ಎನರ್ಜಿ ಆ್ಯಂಡ್ ಇನ್ಫ್ರಾಾಟೆಕ್ನ ವಿಶ್ವನಾಥ್ ಚೌವ್ಹಾಾಣ್, ಸತೀಶ್ ಜಡ್ಡು ಉಪಸ್ಥಿತರಿದ್ದರು. ಆನಂದ್ ಕೆ. ಸ್ವಾಗತಿಸಿ, ನಿರೂಪಿಸಿದರು.