ಮಂಗಳೂರು, ನ 02 (DaijiworldNews/AK): ಕರ್ನಾಟಕ ಪ್ರಸಿದ್ಧ ಗೃಹೋಪಕರಣ ಮಳಿಗೆ ಹರ್ಷ ಒಡೆತನದಹೊಂದಿರುವ ಪ್ರಕಾಶ್ ರಿಟೇಲ್ ಪ್ರೈವೇಟ್ ಲಿಮಿಟೆಡ್, ಉಡುಪಿಯ ಅಂಬಲಪಾಡಿಯಲ್ಲಿ ಕೇಂದ್ರ ಕಛೇರಿ ಹೊಂದಿದ್ದು, ಮೊತ್ತ ಮೊದಲ ಹರ್ಷ ಮಳಿಗೆಯನ್ನು ಉಡುಪಿಯ ಕೆ.ಎಂ ಮಾರ್ಗದಲ್ಲಿ 9 ಮಾರ್ಚ್ 1987ರಲ್ಲಿ ಆರಂಬಿಸಿತು
ಗ್ರಾಹಕರ ಅಭೂತಪೂರ್ವ ಬೆಂಬಲದ ಫಲವಾಗಿ ಉಡುಪಿಯಲ್ಲಿ ಪಡೆದ ಯಶಸ್ಸಿನ ನಂತರದ ವರ್ಷಗಳಲ್ಲಿ ಹರ್ಷ ಮಳಿಗೆಗಳನ್ನು ಕರಾವಳಿ ಕರ್ನಾಟಕದ ಮಂಗಳೂರು, ಪುತ್ತೂರು, ಕುಂದಾಪುರ, ಬ್ರಹ್ಮಾವರ, ಸುರತ್ಕಲ್, ಮಾತ್ರವಲ್ಲದೆ ಮಲೆನಾಡಿನ ಶಿವಮೊಗ್ಗ ಮತ್ತುಉತ್ತರ ಕರ್ನಾಟಕದ ಪ್ರತಿಷ್ಠಿತ ನಗರಗಳಾದ ಹುಬ್ಬಳ್ಳಿ, ಧಾರಾವಾಡ, ಬೆಳಗಾವಿ ಮತ್ತು ಗುಲ್ಬರ್ಗ ಮಹಾನಗರಗಳಲ್ಲೂ ಹಾಗೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ”ಹರ್ಷ’ ಮಳಿಗೆಗಳನ್ನು ವಿಸ್ತರಿಸುವ ಮೂಲಕ 16 ಮಳಿಗೆಗಳಲ್ಲಿ ಒಟ್ಟು 3.5 ಲಕ್ಷ ಚದರದಡಿ ಬೃಹತ್ ರಿಟೇಲ್ ಸ್ಥಳಾವಕಾಶ ಹೊಂದಿದೆ.
ನವಪೀಳಿಗೆಯ ಆಕಾಂಕ್ಷೆಗಳನ್ನು ಪೂರೈಸುವ 3ನೇ ಮಳಿಗೆ
ರಾಜ್ಯಾದ್ಯಂತ ಸಾವಿರಾರು ಗ್ರಾಹಕರು ಹರ್ಷದ ವೈಶಿಷ್ಠ್ಯವನ್ನು ಅನುಭವಿಸಿ ಮೆಚ್ಚಿದ್ದಾರೆ. ಮಂಗಳೂರಿನಲ್ಲಿ 2 ಮಳಿಗೆಗಳನ್ನು ಹೊಂದಿರುವ ಹರ್ಷ, ಇದೇ ಮೊದಲ ಬಾರಿಗೆ ನಗರದ ಮಾಲ್ನಲ್ಲಿ 3 ನೇ ಮಳಿಗೆಯು , ನಿಮ್ಮ ಆಧುನಿಕ ಶಾಪಿಂಗ್ನ ಸುಂದರ ತಾಣವಾಗಿ ಮೂಡಿಬರಲಿದೆ. ನವಪೀಳಿಗೆಯ ಆಕಾಂಕ್ಷೆಗನುಗುಣವಾಗಿ ಉತ್ಕೃಷ್ಟ ಗೃಹೋಪಕರಣಗಳ ಜೊತೆಗೆ ಅಡುಗೆಯ ಸಾಧನ, ಹೊಚ್ಚ ಹೊಸ ಡಿಜಿಟಲ್ ತಂತ್ರಜ್ಞಾನದ ವಸ್ತು- ವೈವಿಧ್ಯಗಳೊಂದಿಗೆ ಕಂಗೋಳಿಸುತ್ತಿರುವ’ ಹರ್ಷ ಮಂಗಳೂರಿನ ಫಿಜ಼ಾ ಬೈ ನೆಕ್ಸಸ್ ಮಾಲ್ನ ಸೆಕೆಂಡ್ ಫ್ಲೋರ್ನಲ್ಲಿ , ನಾಳೆ ಅಂದರೆ, ದಿನಾಂಕ ನವೆಂಬರ್ ಬೆಳಗ್ಗೆ 11.00 ಕ್ಕೆ ಶುಭಾರಂಭಗೊಳ್ಳಲಿದ್ದು, ನಿಮ್ಮೆಲ್ಲ
ಶಾಪಿಂಗ್ನ ವಿನೂತನ ಅನುಭವ ನೀಡಲಿದೆ.
ಸುವಿಶಾಲವಾಗಿ ಮೈದುಂಬಿರುವ ಹರ್ಷದ ನೂತನ ಮಳಿಗೆಯು ಅಂತಾರಾಷ್ಟ್ರೀಯ ಮಟ್ಟದ ಡಿಸ್ಪ್ಲೇಯೊಂದಿಗೆ ಗ್ರಾಹಕರಿಗೆ ಶಾಪಿಂಗ್ನ ವಿಶೇಷ ಅನುಭವನ್ನೇ ನೀಡಲಿದೆ. 20,000 ಚದರದಡಿ ಸ್ಥಳಾವಕಾಶವಿರುವ ಸಂಪೂರ್ಣ ಹವಾನಿಯಂತ್ರಿತ ಹರ್ಷದಲ್ಲಿ ವೈವಿಧ್ಯಮಯ ಉತ್ಪನ್ನಗಳ ವಿಶಾಲ ಶ್ರೇಣಿಯನ್ನೇ ನೋಡಬಹುದಾಗಿದೆ.
ಆಡಿಯೋ ಸಿಸ್ಟಮ್, ಹೋಮ್ ಥಿಯೇಟರ್, ಸ್ಮಾಟ್ ಫೋನ್, ಕಂಪ್ಯೂಟರ್, ಲ್ಯಾಪ್ಟಾಪ್, ಪ್ರಿಂಿಗೂ ಟರ್ಸ್, ಎಲ್ಇಡಿ ಟಿ.ವಿ, ಏರ್ ಕಂಡೀಷನರ್, ರೆಫ್ರಿಜರೇಟರ್, ವಾಶಿಂಗ್ ಮಶಿನ್, ಮೈಕ್ರೋವೇವ್ ಅವನ್, ಡಿಶ್ವಾಶರ್, ಡೀಪ್ ಫ್ರೀಜರ್, ಸ್ಮಾರ್ಟ್ ವಾಚ್ ಹಾಗೂಇವುಗಳಿಗೆ ಸಂಬಂಧಿಸಿದ ಆಯಕ್ಸಸರೀಸ್ ಸೇರಿದಂತೆ ಎಲ್ಲಾ ತರಹದ ಡಿಜಿಟಲ್ ಹಾಗೂ ಇಲೆಕ್ಟ್ರಾನಿಕ್ ಗೃಹೋಪಕರಣಗಳು. ಕುಕ್ಕಿಂಗ್ ಸೆಟ್, ಪ್ರೆಶರ್ ಕುಕ್ಕರ್, ಮಿಕ್ಸಿ, ಗ್ರೈಂಡರ್, ಗ್ಯಾಸ್ ಸ್ಟವ್, ಹಾಬ್, ಚಿಮ್ಮಿ, ಫ್ಯಾನ್, ಕೂಲರ್, ಐರನ್ ಬಾಕ್ಸ್, ಕೆಟಲ್, ವಾಟರ್ ಪ್ಯೂರಿಫೈಯರ್, ವ್ಯಾಕ್ಯೂಮ್ ಕ್ಲೀನರ್ ಸೇರಿದಂತೆ ಎಲ್ಲಾ ಅಡುಗೆಯ ಸಾಧನಗಳು ಹಾಗೂ ಇಲೆಕ್ಟ್ರಾನಿಕ್ ಉಪಕರಣಗಳು. ಹೀಗೆ ತಮ್ಮ ಆಯ್ಕೆಯ ವಿಶ್ವವಿಖ್ಯಾತ ಬ್ರಾಂಡ್ನ ಗೃಹೋಪಯೋಗಿ ಉಪಕರಣಗಳನ್ನು ಒಂದೇ ಸೂರಿನಡಿ ಖರೀದಿಸುವ ಸೌಲಭ್ಯ ಇಲ್ಲಿನ ಗ್ರಾಹಕರಿಗೆ ಹರ್ಷೋಲ್ಲಾಸದೊಂದಿಗೆ ದೊರೆಯಲಿದೆ.
ಮಂಗಳೂರಿನ ಮೂರನೇ ಮಳಿಗೆ ನಾಳೆ ಅಂದರೆ, ದಿನಾಂಕ 3 ನವೆಂಬರ್ ಬೆಳಿಗ್ಗೆ 11.00ಕ್ಕೆ ಫಿಜ಼ಾ ಬೈ ನೆಕ್ಸಸ್ ಮಾಲ್ನ ಸೆಕೆಂಡ್ ಫ್ಲೋರ್ನಲ್ಲಿ, ಶುಭಾರಂಭಗೊಳ್ಳಲಿದೆ.ಮಳಿಗೆಯನ್ನು ಯು.ಟಿ. ಖಾದರ್, ಸಭಾಧ್ಯಕ್ಷರು ಕರ್ನಾಟಕ ವಿಧಾನ ಸಭೆ ಇವರು ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವೇದವ್ಯಾಸ ಕಾಮತ್, ಶಾಸಕರು ಇವರು ವಹಿಸಿಕೊಳ್ಳುವರು. ಹಾಗೆಯೇ ಮುಖ್ಯ ಅಭ್ಯಾಗತರಾಗಿ ಶ್ರೀ ವಿನಯ್ ಕುಮಾರ್ ಸೊರಕೆ ಮಾಜಿ ಸಚಿವರು, ಶ್ರೀ .ಜೆ. ಆರ್. ಲೋಬೋ ಮಾಜಿ ಶಸಕರು, ಶ್ರೀ ಸುಧಿರ್ ಶೆಟ್ಟಿ ಕಣ್ಣೂರು, ಮಹಾಪೌರರು ಮಂಗಳೂರು ನಗರಪಾಲಿಕೆ ಪಾಲ್ಗೊಳ್ಳುವರು.