ಮಂಗಳೂರು, ನ 02(DaijiworldNews/RA): ನವೆಂಬರ್ 1 ರ ಕರ್ನಾಟಕ ರಾಜ್ಯೋತ್ಸವದಂದು ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಸಿಗಬೇಕು ಎಂದು ಆಗ್ರಹಿಸಿದ ತುಳು ಕರ್ನಾಟಕ ರಾಜ್ಯೋತ್ಸವವನ್ನು ಕೆಲವು ಸಂಘಟನೆಗಳು ಕರಾಳ ದಿನವನ್ನಾಗಿ ಆಚರಿಸಿದೆ.
ಈ ನಿಟ್ಟಿನಲ್ಲಿ ಟ್ವೀಟ್ ಅಭಿಯಾನ ಹಮ್ಮಿಕೊಂಡಿದ್ದು ನಿನ್ನೆ ಬೆಳಗ್ಗಿನಿಂದ ರಾತ್ರಿಯವರೆಗೆ ಸಾವಿರಾರು ಮಂದಿ ಟ್ವಿಟ್ ಮಾಡುವ ಮುಲಕ ತುಳು ಭಾಷೆಗೆ ಸೂಕ್ತ ಸ್ಥಾನ ಮಾನ ನೀಡುವಂತೆ ಬೆಂಬಲ ಸೂಚಿಸಿದ್ದಾರೆ.
ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಹೀಗಾಗುತ್ತಿದ್ದು, ಜನಪ್ರತಿನಿಧಿಗಳಿಗೆ ಕಲಾಪಗಳಲ್ಲಿ ಆಗ್ರಹಿಸಬೇಕು ಎಂದು ಅನೇಕರು ಟ್ವೀಟ್ ಮೂಲಕ ಪ್ರಧಾನಿ, ಮುಖ್ಯಮಂತ್ರಿಗಳು, ಸಂಸದರು, ಶಾಸಕರು ಸಹಿತ ವಿವಿಧ ಜನಪ್ರತಿನಿಧಿಗಳನ್ನು ಟ್ವೀಟ್ ಮೂಲಕ ಒತ್ತಾಯಿಸಿದರು.
ಇನ್ನು ತುಳು ಭಾಷೆ ರಾಜ್ಯ ಭಾಷೆಯನ್ನಾಗಿ ಘೋಷಣೆ ಮಾಡಬೇಕು, ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು ಎಂದು ಹಲವು ವರ್ಷಗಳಿಂದ ಅಭಿಯಾನ ಸೇರಿದಂತೆ ಹಲವು ಸಂಘಟನೆಗಳು ಮನವಿ ನೀಡುತ್ತಾ ಬಂದಿದೆ. ಆದರೆ ಇನ್ನೂ ತುಳುನಾಡಿಗರ ಈ ಕನಸು ಈಡೇರಿಲ್ಲ ಎಂದು ಇದೇ ಟ್ವಿಟ್ ಮೂಲಕ ತುಳು ಪ್ರೇಮಿಗಳು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.