ಮಂಗಳೂರು, ನ 1 (DaijiworldNews/MS): ದಾಯ್ಜಿವಲ್ಡ್ ವಾಹಿನಿಯು , ವಿನ್ಸಿ ಇಡ್ಲಿ ಮಾರ್ಕೆಟ್ ಪ್ರಾಯೋಜಕತ್ವದಲ್ಲಿ ನವರಾತ್ರಿಗಾಗಿ ಆಯೋಜಿಸಿದ್ದ ವಿನೂತನ ಸ್ಪರ್ಧೆ ಅಂದದ ಶಾರದೆಗೆ ಅಭೂತಪೂರ್ವ ಬೆಂಬಲ ದೊರೆತಿದೆ.
5 ವರ್ಷದಿಂದ 11ವರ್ಷದೊಳಗಿನ ಮಕ್ಕಳಿಗಾಗಿ ಈ ಸ್ಪರ್ಧೆ ಆಯೋಜಿಸಲಾಗಿದ್ದು, ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಸೇರಿದಂತೆ ೩೦೦ಕ್ಕೂ ಅಧಿಕ ವೀಡಿಯೋಗಳು ನಮಗೆ ಬಂದು ತಲುಪಿತ್ತು.
೩೦೦ ವೀಡಿಯೋದಲ್ಲಿ ಉತ್ತಮವಾಗಿ ಮೂಡಿಬಂದ 50 ವೀಡಿಯೋ ಆಯ್ಕೆ ಮಾಡಿ, ತೀರ್ಪುಗಾರರು ೧೦ ಆಯ್ಕೆ ಮಾಡಿದ್ದರು. ಟಾಪ್ 10ರಲ್ಲಿ ಮತ್ತೆ ಟಾಪ್ 6 ಆಯ್ಕೆ ಮಾಡಿದ್ದು, ಅತ್ಯಧಿಕ ಅಂಕ ಪಡೆದ ಮಗು ಅಂದದ ಶಾರದೆಯಾಗಿ ಆಯ್ಕೆ ಮಾಡಲಾಗಿದೆ.
ತೀರ್ಪುಗಾರರು ಮೆಚ್ಚಿದ ಟಾಪ್5 ವೀಡಿಯೋಗಳಿಗೆ ಆಕರ್ಷಕ ಉಡುಗೊರೆಯನ್ನು ನೀಡಲಾಗುತ್ತಿದೆ. ಪ್ರಥಮ ಸ್ಥಾನ ಪಡೆದ ಮಗುವಿಗೆ 10 ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಗುತ್ತಿದೆ.
ನುರಿತ ತೀರ್ಪುಗಾರರಿದ್ದ ತಂಡ ಅಂದದ ಶಾರದೆಯ ಫಲಿತಾಂಶ ಪ್ರಕಟಿಸಿದೆ. ಅಂದದ ಶಾರದೆ ವೀಡಿಯೋ ಸ್ಪರ್ಧೆಯಲ್ಲಿ ಎಲ್ಲಾ ವೀಡಿಯೋಗಳು ಆಕರ್ಷಕವಾಗಿದ್ದರೂ ಕೂಡಾ ತೀರ್ಪುಗಾರರು ಮಗುವಿನ ವಯಸ್ಸಿನ ಮಿತಿ, ಮುಖದ ಹಾವಭಾವ, ಕ್ಯಾಮರಾ ವರ್ಕ್, ಕ್ರಿಯೆಟಿವಿಟಿ, ಮೇಕಪ್, ಎಡಿಟಿಂಗ್ ಗಳನ್ನು ಪರಿಗಣಿಸಿ ಅಂಕ ನೀಡಲಾಗಿತ್ತು. ಹಲವಾರು ಸ್ಪರ್ಧಿಗಳು 5 ವರ್ಷದಿಂದ ಕೆಳಗೆ ಹಾಗೂ ೧೨ವರ್ಷಕ್ಕಿಂತ ಮೇಲಿನವರು ಭಾಗವಹಿಸಿದ್ದು ಅವರ ವೀಡಿಯೋಗಳನ್ನು, ವರ್ಟಿಕಲ್ ವೀಡಿಯೋಗಳನ್ನು ಹಾಗೂ ಮದುಮಗಳ ರೀತಿಯಲ್ಲಿ ಶೂಟಿಂಗ್ ನಡೆಸಿದ್ದ ವೀಡಿಯೋಗಳನ್ನು ಸ್ಪರ್ಧೆಗೆ ಪರಿಗಣಿಸಲಿಲ್ಲ. ಅಂದದ ಶಾರದೆ ವೀಡಿಯೋ ಸ್ಪರ್ಧೆಯ ಫಲಿತಾಂಶ ಶೀಘ್ರದಲ್ಲೇ ಪ್ರಕಟಿಸಲಾಗುವುದು.