ಉಡುಪಿ, ಅ 31 (DaijiworldNews/AK): ದೀಪಾವಳಿಯ ವಿಶೇಷ ಸಂದರ್ಭದಲ್ಲಿ ದಾಯ್ಜಿವರ್ಲ್ಡ್ ಉಡುಪಿ, ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಕನ್ನರ್ಪಾಡಿ ಆಶ್ರಯದಲ್ಲಿ ಸತತ ಐದನೇ ಬಾರಿಗೆ “ರಂಗಿನ ರಂಗೋಲಿ-2023” ರಂಗೋಲಿ ಬಿಡಿಸುವ ಸ್ಪರ್ಧೆಯನ್ನು ಆಯೋಜಿಸುತ್ತಿದೆ.
ಸ್ಪರ್ಧೆಯು 2 ವಿಭಾಗಗಳಲ್ಲಿ ನಡೆಯಲಿದ್ದು, 16 ವರ್ಷದ ವರೆಗಿನವರಿಗೆ ಮತ್ತು 16 ವರ್ಷ ಮೇಲ್ಪಟ್ಟವರಿಗೆ ಎರಡು ಪ್ರತ್ಯೇಕ ವಿಭಾಗಗಳಲ್ಲಿ ಭಾಗವಹಿಸುವ ಅವಕಾಶವಿದೆ.
ಐದನೇ ಬಾರಿಗೆ ಆಯೋಜಿಸಲಾಗಿರುವ ಸ್ಪರ್ಧೆಯು ನವೆಂಬರ್ 5 ರಂದು ಭಾನುವಾರ ಕನ್ನರಪಾಡಿಯ ಸೇಂಟ್ ಮೇರಿ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ನಡೆಯಲಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವವರು ನವೆಂಬರ್ 02, 2023 ರ ಒಳಗೆ ನೋಂದಾವಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಸ್ಪರ್ಧೆಯ ನಿಯಮಗಳು :
• ರಂಗೋಲಿಯ ಗಾತ್ರ 4*4 ಫೀಟ್ ಮೀರಬಾರದು.
• ಸ್ಪರ್ಧಿಗಳಿಗೆ ಗರಿಷ್ಠ 2 ಗಂಟೆಯ ಕಾಲಾವಕಾಶ ಕೊಡಲಾಗುವುದು.
• ಕೇವಲ ರಂಗೋಲಿ ಪುಡಿ ಬಳಸಿ, ರಂಗೋಲಿಯನ್ನು ಬಿಡಿಸಬೇಕು
• ರಂಗೋಲಿ ಬಿಡಿಸಲು ಅಗತ್ಯವಿರುವ ವಸ್ತುಗಳನ್ನು ಸ್ಪರ್ಧಿಗಳೇ ತರಬೇಕು.
• ಸ್ಪರ್ಧಿಗಳ ಕ್ರಿಯಾಶೀಲತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.
• ಸ್ಪರ್ಧೆಯಲ್ಲಿ ಭಾಗವಹಿಸುವವರು ಜನನ ಪ್ರಮಾಣಪತ್ರ / ಆಧಾರ್ ಕಾರ್ಡ್ ಪ್ರತಿಯನ್ನು contestdwudupi@gmail.com ಗೆ ಕಳುಹಿಸಬೇಕು.
• ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರ ನೀಡಲಾಗುವುದು.
• ಸ್ಪರ್ಧೆಯಲ್ಲಿ ಭಾಗವಹಿಸುವವರು ಸ್ಪರ್ಧೆಯ ದಿನ ಬೆಳಗ್ಗೆ 9.15 ರ ಒಳಗೆ ಹಾಜರಾಗಬೇಕು.
• ನೋಂದಾವಣೆಗೆ ಕೊನೆಯ ದಿನಾಂಕ : ನವೆಂಬರ್ 02, 2023
ಸ್ಪರ್ಧೆಯ ಪ್ರತೀ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ವಿಜೇತರಿಗೆ ನಗದು, ಫಲಕ, ಪ್ರಮಾಣಪತ್ರ ಮತ್ತು 3 ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು.
ನೋಂದಾವಣೆಗಾಗಿ ಸಂಪರ್ಕಿಸಿ :
ದಾಯ್ಜಿವರ್ಲ್ಡ್ ಉಡುಪಿ
3 ನೇ ಮಹಡಿ, ಮಾಂಡವಿ ಟ್ರೇಡ್ ಸೆಂಟರ್,
ಕಡಿಯಾಳಿ, ಉಡುಪಿ
Ph.: +91 73386 37683, 73386 37682
ಇಮೇಲ್ ಐಡಿ: contestdwudupi@gmail.com