ಕಾಸರಗೋಡು, ಅ 31 (DaijiworldNews/MS): ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಸಚಿವರುಗಳ ನೇತೃತ್ವದಲ್ಲಿ ನವಂಬರ್ 18 ರಂದು ಪೈವಳಿಕೆ ನಗರ ಶಾಲೆಯಲ್ಲಿ ನಡೆಯಲಿರುವ ನವಕೇರಳ ಸದಸ್ ನ ಪೂರ್ವ ಸಿದ್ಧತೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಆಹಮ್ಮದ್ ಅಧ್ಯಕ್ಷತೆಯಲ್ಲಿ ಪೈವಳಿಕೆ ಗ್ರಾಮ ಪಂಚಾಯತ್ ಕಛೇರಿ ಸಭಾಂಗಣದಲ್ಲಿ ಅವಲೋಕನಾ ಸಭೆ ನಡೆಯಿತು. ರಾಜ್ಯದ ಪ್ರಥಮ ನವಕೇರಳ ಸದಸ್ ಗೆ ಮಂಜೇಶ್ವರ ವಿಧಾನಸಭಾ ಕ್ಷೇತ್ರವೂ ಸಾಕ್ಷಿಯಾಗಲಿದ್ದು, ಇದರಿಂದ ಕಾರ್ಯಕ್ರಮ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಚರ್ಚಿಸಲಾಯಿತು.
ನವಂಬರ್ 18 ರಂದು ಅಪರಾಹ್ನ 2 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ನವ ಕೇರಳ ಸದಸ್ ಗೆ ಚಾಲನೆ ನೀಡ ಲಾಗುವುದು. ಕಾರ್ಯಕ್ರಮದ ಯಶಸ್ವಿಗೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯತ್ ಗಳ ಕುಟುಂಬ ಶ್ರೀ, ಸಿ ಡಿ ಎಸ್ ಸಭೆ ಕರೆಯಲಾಗುವುದು. ಪೈವಳಿಕೆ, ವರ್ಕಾಡಿ ಪಂಚಾಯತ್ ಗಳ ಸಭೆ ಈಗಾಗಲೆ ಕರೆಯಲಾಗಿದೆ. ಉಳಿದ ಗ್ರಾಮ ಪಂಚಾಯತ್ ಗಳ ಸಭೆ ನವಂಬರ್ ಮೂರ ರೊಳಗೆ ಪೂರ್ಣ ಗೊಳಿಸಲಾಗುವುದು. ನವಂಬರ್ 2 ರಂದು ಮಂಜೇಶ್ವರ ಬ್ಲಾಕ್ ನ ಎಸ್. ಸಿ, ಎಸ್ ಟಿ ಪ್ರಮೋಟರ್ ಗಳ ಸಭೆ ಕರೆಯಲಾಗುವುದು. ಎಲ್ಲಾ ಶಾಲೆಗಳ ಮುಖ್ಯೋಪಾಧ್ಯಾಯ ರು, ಸಂಚಾಲಕ ರು , ರಕ್ಷಕ - ಶಿ ಕ್ಷಕ ಸಂಘ ದ ಅಧ್ಯಕ್ಷ ರುಗಳ ಸಂಯುಕ್ತ ಸಭೆಯು ನವಂಬರ್ ಎರಡರಂದು ನಡೆಯಲಿದೆ. ನವಂಬರ್ 4 ಮತ್ತು 5 ರಂದು ಮನೆ ಅಂಗಳ ದಲ್ಲಿ ಸದಸ್ ನಡೆ ಯಲಿದೆ. ದೀಪಾವಳಿ ದಿನವಾದ ನವಂಬರ್ 12 ರಂದು ಎಲ್ಲಾ ಮನೆಗಳಲ್ಲೂ ನವ ಕೇರಳ ದೀಪ ಉರಿಸಲಾಗುವುದು. 15 ಮತ್ತು 16 ರಂದು ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಮೆರವಣಿಗೆ ನಡೆಸಲಾಗುವುದು.ಪೊಲೀಸ್ , ಅಗ್ನಿ ಶಾಮಕ ದಳ, ಸ್ಕೌಟ್ಸ್ ಆಂಡ್ ಗೈಡ್ಸ್, ಎನ್ ಎಸ್ ಎಸ್, ಎನ್ ಸಿ ಸಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಭೆ ಕರೆಯಲಾಗುವುದು.
ಸ್ವಾಗತ ಸಮಿತಿ ಸಂಚಾಲಕಿ ಆಗಿರುವ ಜಿಲ್ಲಾ ಪಂಚಾಯ ತ್ ಸದಸ್ಯೆ ಬೇಬಿ ಬಾಲಕೃಷ್ಣ ನ್ , ಜಿಲ್ಲಾಧಿಕಾರಿ ಕೆ. ಇಂಪಾಶೇಖರ್, ಸ್ವಾಗತ ಸಮಿತಿ ಸಂಚಾಲಕ ರಾಗಿರುವ ಕಂದಾಯ ಅಧಿಕಾರಿ ಅತುಲ್ ಸ್ವಾಮಿನಾಥ್, ಪ್ರಚಾರ ಸಮಿತಿ ಅಧ್ಯಕ್ಷ ಕೆ . ಆರ್ ಜಯಾನಂದ, ಪೈವಳಿಕೆ ಗ್ರಾಮ ಪಂಚಾಯತ್ ಕಾರ್ಯದರ್ಶಿ ವಿ. ಜಗದೀಶ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಇ.ಕೆ ಅರ್ಜುನನ್,ಪ್ರಚಾರ ಸಮಿತಿ ಸಹ ಸಂಚಾಲಕ ಎ.ನಾಗೇಶ್ ಮೊದಲಾದವರು ಮಾತನಾಡಿ ದರು . ಕುಟುಂಬ ಶ್ರೀ, ಜಿಲ್ಲಾ ಮಿಷನ್ ಸಂಯೋಜಕ ಟಿ. ಟಿ ಸುರೇಂದ್ರನ್, ಪಂಚಾಯತ್ ಅಧ್ಯಕ್ಷರುಗಳು, ರಾಜಕೀಯ ಪಕ್ಷಗಳ ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು.