ಬಜ್ಪೆ, ಅ 30 (DaijiworldNews/MS): ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಕಟೀಲು ಗಿಡಿಗೆರೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಮಹಿಳೆ ಕೊಲೆಯಾಗಿದ್ದು, ಮೂರು ದಿನಗಳ ಬಳಿಕ ಭಾನುವಾರ ಬೆಳಕಿಗೆ ಬಂದಿದ್ದು ಮಗನೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಗಿಡಿಗೆರೆ ನಿವಾಸಿ ರತ್ನಾ ಶೆಟ್ಟಿ (60) ಕೊಲೆಯಾದವರು. ಕೊಲೆ ಆರೋಪಿ ಮಹಿಳೆಯ ಪುತ್ರ ರವಿರಾಜ್ ಶೆಟ್ಟಿ (33) ಎಂಬಾತನನ್ನು ಬಜ್ಪೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಟೀಲು ಚರ್ಚ್ ಬಳಿಯ ಹೊಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ರತ್ನಾ ಶೆಟ್ಟಿ ತನ್ನ ಮಗನೊಂದಿಗೆ ವಾಸವಿದ್ದರು. ಶುಕ್ರವಾರ ಅನಾರೋಗ್ಯ ಎಂದು ಕೆಲಸಕ್ಕೆ ಹೋಗದ ರವಿರಾಜ್ ಮನೆಯಲ್ಲಿಯೇ ಇದ್ದ. ನಂತರ ತಾಯಿ ಮನೆಯಲ್ಲಿದ್ದರೂ ಬೀಗ ಹಾಕಿ ತೆರಳಿದ್ದು ವಾಪಾಸು ಬಂದಿರಲಿಲ್ಲ
ಭಾನುವಾರ ಮನೆಯ ಬಳಿ ವಾಸನೆ ಬರುತ್ತಿದ್ದು ಗಮನಿಸಿ ಅಕ್ಕಪಕ್ಕದವರು ಕಿಟಕಿ ಮೂಲಕ ಪರಿಶೀಲನೆ ಮಾಡಿ ಬಜ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ್ದು ಮಹಿಳೆ ಮೃತದೇಹ ಕೈಕಾಲುಗಳನ್ನು ಕಟ್ಟಿದ, ಕುತ್ತಿಗೆ ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.