ಮಂಗಳೂರು, ಅ 30 (DaijiworldNews/HR): ಜ್ವರ ಭಾದಿಸಿ ಕೋಮಾದಲ್ಲಿದ ಕುಕ್ಕಾಜೆಯ ಏಳು ವರ್ಷದ ಪುಟ್ಟ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ನಡೆದಿದೆ.
ಮೃತ ಬಾಲಕಿಯನ್ನು ಎಸ್ಸೆಸ್ಸೆಫ್ ಮಾಜಿ ಅಧ್ಯಕ್ಷರೂ, ಹೆಜಮಾಡಿ ಕೋಡಿ ಮಾಜಿ ಮುಅಲ್ಲಿಮರೂ ಆಗಿರುವ ಶರೀಪ್ ಝೈನಿ ಬೊಳ್ಳಾಯಿರವರ ಏಳು ವರ್ಷದ ಮಗಳು ಸಲ್ಮಾ ನಷೀದಾ ಎಂದು ಗುರುತಿಸಲಾಗಿದೆ.
ಬಾಲಕಿಗೆ ತೀವ್ರ ಜ್ವರ ಕಾಣಿಸಿಕೊಂಡು ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪುಟ್ಟ ಬಾಲಕಿ ಕೋಮಾಕ್ಕೆ ತಳುಪಿ ಇದೀಗ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎನ್ನಲಾಗಿದೆ.