ಕಾಸರಗೋಡು, ಅ 29 (DaijiworldNews/HR): ಕೇರಳದ ಕಳಮಶೇರಿಯಲ್ಲಿ ನಡೆದ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ನಿಗಾ ಇರಿಸಲಾಗಿದ್ದು, ತಪಾಸಣೆ ಚುರುಕು ಗೊಳಿಸಲಾಗಿದೆ.
ಸಾಂದರ್ಭಿಕ ಚಿತ್ರ
ಪೊಲೀಸ್, ಬಾಂಬ್ ನಿಷ್ಕ್ರಿಯ ದಳ, ರೈಲ್ವೆ ಭದ್ರತಾ ಪಡೆ ಸಿಬಂದಿಗಳು ತಪಾಸಣೆ ನಡೆಸುತ್ತಿದ್ದಾರೆ. ಬಸ್ಸು ನಿಲ್ದಾಣ, ಮಳಿಗೆಗಳು ಹಾಗೂ ಇನ್ನಿತರ ಕಡೆ ಗಳಲ್ಲಿ ಪೊಲೀಸ್ ಭದ್ರತೆ ತೀವ್ರಗೊಳಿಸಲಾಗಿದೆ.
ಇನ್ನು ವಾಹನಗಳ ತಪಾಸಣೆ ನಡೆಸಲಾಗುತ್ತಿದ್ದು, ಪ್ರವಾಸಿ ಕೇಂದ್ರಗಳಲ್ಲೂ ವಿಶೇಷ ನಿಗಾ ಇರಿಸಲಾಗಿದೆ. ಹೊಟೇಲ್ ಹಾಗೂ ವಸತಿ ಗೃಹಗಳಲ್ಲೂ ತಪಾಸಣೆ ನಡೆಸಲಾಗುತ್ತಿದೆ.