ಕಾರ್ಕಳ, ಅ 28 (DaijiworldNews/AK):ನಗರದ ಹೃದಯ ಭಾಗದಲ್ಲಿರುವ ಮೂರು ಮಾರ್ಗದ ಸಂಪರ್ಕದ ಮಂಗಳೂರು ರಸ್ತೆ ಕಿರಿದಾಗಿದ್ದು, ಪುರಸಭೆಯಿಂದ ಮಳೆ ನೀರು ಹರಿಯಲು ಚರಂಡಿ ನಿರ್ಮಿಸಿ ಜನರಿಗೆ ನಡೆದಾಡಲು ಪುಟ್ಪಾತ್ ನಿರ್ಮಿಸಿದ್ದು, ಪ್ರಜ್ಞಾವಂತ ಜನರು ತಮ್ಮ ಪ್ರಜ್ಞೆಯನ್ನು ಮರೆತು ಪುಟ್ಪಾತ್ ಮೇಲೆ ತಮ್ಮ ದ್ವಿಚಕ್ರ ವಾಹನವನ್ನು ನಿಲ್ಲಿಸುತ್ತಿರುವುದರಿಂದ ಪಾದಚಾರಿಗಳ ಓಡಾಟಕ್ಕೆ ತೊಡಕಾಗುತ್ತಿದೆ ಎಂದು ಪುರಸಭೆಯ ಮಾಜಿ ಸದಸ್ಯ ಪ್ರಕಾಶ್ ರಾವ್ ವಿನೂತನ ರೀತಿಯಲ್ಲಿ ಜನಜಾಗೃತಿ ಮೂಡಿಸಿದ್ದಾರೆ.
ಬೆಳಗಿನಿಂದ ಸಾಯಂಕಾಲದವರೆಗೆ ಪುಟ್ ಪಾತ್ ನಲ್ಲಿ ದ್ವಿಚಕ್ರ ವಾಹನ ನಿಲ್ಲಿಸಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳ ಹಾಗೂ ಇತರರ ಓಡಾಟಕ್ಕೆ ತೊಡಕಾಗುತ್ತಿದೆ. ಇದರಿಂದ ಅವರು ಇಕ್ಕಟ್ಟಾಗಿರುವ ರಸ್ತೆಗೆ ಇಳಿಯಬೇಕಾಗಿದೆ.ಇದು ಅವ್ಯವಸ್ಥೆಯ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಕಾರ್ಕಳ ಪುರಸಭೆ ನಗರ ಪೊಲೀಸ್ ಇಲಾಖೆ ಮೌನದ ಜಾಣ ನಡೆ ಪ್ರದರ್ಶಿಸುತ್ತಿದೆ ಎಂಬ ಆರೋಪಿಸಿದ್ದಾರೆ.
ಹೀಗಾಗಿ ಪುಟ್ಬಾತ್ನಲ್ಲಿ ನಿಲ್ಲಿಸಿದ ದ್ವಿಚಕ್ರ ವಾಹನಗಳಿಗೆ ಭಿತ್ತಿಪತ್ರವನ್ನು ಅಂಟಿಸುವ ಮೂಲಕ ಸಾರ್ವಜನಿಕ ಸಮಸ್ಯೆ ಕುರಿತು ವಿನೂತನ ರೀತಿಯಲ್ಲಿ ಜನಜಾಗೃತಿ ಮೂಡಿಸಲು ಮುಂದಾದರು.