ಮಂಗಳೂರು, ಅ 28 (DaijiworldNews/AK): ಫಸ್ಟ್ ನ್ಯೂರೋ ಮೆದುಳು ಮತ್ತು ನರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅತ್ಯುತ್ತಮ ಉದಯೋನ್ಮುಖ ಸ್ಟ್ರೋಕ್ ಘಟಕಕ್ಕಾಗಿ ಬೆಸ್ಟ್ ಎಮರ್ಜಿಂಗ್ ಸ್ಟ್ರೋಕ್ ಯುನಿಟ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಈ ಪ್ರಶಸ್ತಿಯನ್ನು ವಾಯ್ಸ್ ಆಫ್ ಹೆಲ್ತ್ ಕೇರ್ ಹಾಗೂ ಇಂಡಿಯನ್ ಸ್ಟ್ರೋಕ್ ಅಸೋಸಿಯೇಸನ್ ಇವರ ಸಹಭಾಗಿತ್ವದಲ್ಲಿ ಅ.೨೭ ರಂದು ಅಹಮದಾಬಾದ್ನ ತಾಜ್ ಸ್ಕೈ ಲೈನ್ನಲ್ಲಿ ನಡೆದ ಸಮಾರಂಭದಲ್ಲಿ ಡಾ. ಮೊಹಮ್ಮದ್ ಶಮೀದ್ ಕೆ.ಎ ಕನ್ಸಲ್ಟೆಂಟ್ ನ್ಯೂರೋಲಜಿಸ್ಟ್ ಪ್ರಶಸ್ತಿ ಸ್ವೀಕರಿಸಿದರು.
ವಾಯ್ಸ್ ಆಫ್ ಹೆಲ್ತ್ ಕೇರ್ ಫಸ್ಟ್ ನ್ಯೂರೋ ಮೆದುಳು ಮತ್ತು ನರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಟ್ರೋಕ್ ಕೇರ್ನ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ.
ಈ ಪ್ರಶಸ್ತಿ ಯನ್ನು ಸ್ವೀಕರಿಸಲು ನಮಗೆ ಅಪಾರ ಗೌರವಿದೆ ಎಂದು ಫಸ್ಟ್ ನ್ಯೂರೋ ಮೆದುಳು ಮತ್ತು ನರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕ ಡಾ. ರಾಜೇಶ್ ಶೆಟ್ಟಿ ಹೇಳಿದರು.