ಬಂಟ್ವಾಳ, ಅ 28 (DaijiworldNews/MS): ಬೀದಿ ನಾಯಿಗಳ ಸಂತಾನ ನಿಯಂತ್ರಣ ನಿಯಮಾವಳಿಯಂತೆ ಬಂಟ್ವಾಳ ಪುರಸಭೆ ವ್ಯಾಪ್ತಿಯ ಬೀದಿನಾಯಿಗಳನ್ನು ಹಿಡಿದು ಮಂಗಳೂರಿನ ಅನಿಮಲ್ ಕೇರ್ ಟ್ರಸ್ಟ್ ಸಂಸ್ಥೆಯಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿ ರೇಬಿಸ್ ಲಸಿಕೆ ನೀಡಿ ಮೂರು ದಿನಗಳ ಆರೈಕೆಯ ನಂತರ ಹಿಡಿದ ಸ್ಥಳಕ್ಕೆ ವಾಪಸ್ ತಂದುಬಿಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಅಕ್ಟೋಬರ್ 28ರ ಶನಿವಾರ ಬಂಟ್ವಾಳ ಪುರಸಭೆ ವ್ಯಾಪ್ತಿಯ ಬೀದಿನಾಯಿಗಳನ್ನು ಅನಿಮಲ್ ಕೇರ್ ಟ್ರಸ್ಟ್ ಸಂಸ್ಥೆಯವರು ಬೀದಿನಾಯಿಗಳನ್ನು ಹಿಡಿಯಲಿದ್ದು, ಪುರಸಭಾ ವ್ಯಾಪ್ತಿಯ ಸಾರ್ವಜನಿಕರು ಸಾಕು ನಾಯಿಗಳನ್ನು ಹೊರಗಡೆ ಬೀದಿಗೆ ಬಿಡದಂತೆ ಬಂಟ್ವಾಳ ಪುರಸಭಾ ಮುಖ್ಯ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.