ಪುತ್ತೂರು, ಅ.27 (DaijiworldNews/AA/HR): ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಯು ತನಿಖೆಯನ್ನು ಚುರುಕುಗೊಳಿಸಿದ್ದು, ಇದೀಗ ಆರೋಪಿಯ ಸುಳಿವಿಗೆ 2 ಲಕ್ಷ ರೂ. ನಗದು ಬಹುಮಾನ ಘೋಷಿಸಿದೆ.
ಆರೋಪಿ ನೌಷದ್ ಜೊತೆಗೆ ಪಿಎಫ್ಐ ನ ಸದಸ್ಯರಾದ ಮತ್ತಿಬ್ಬರು ಆರೋಪಿಗಳು ಅಬ್ದುಲ್ ನಾಸೀರ್ ಮತ್ತು ಅಬ್ದುಲ್ ರೆಹಮಾನ್ ಅವರ ಮಾಹಿತಿಗೂ 2 ಲಕ್ಷ ಬಹುಮಾನ ಘೋಷಿಸಿದೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಬೆಳ್ತಂಗಡಿಯ ಪಡಂಗಡಿ ನಿವಾಸಿ ನೌಷಾದ್ ಶಾಮೀಲಾಗಿದ್ದು, ಈತನ ಸುಳಿವಿಗೆ 2 ಲಕ್ಷ ರೂ. ನಗದು ಬಹುಮಾನವನ್ನು ಘೋಷಣೆ ಮಾಡಲಾಗಿದೆ.
ಇನ್ನು ನೌಷಾದ್ ನಿಷೇದಿತ ಪಿಎಫ್ಐ ಸಂಘಟನೆಯ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದ ಎನ್ನಲಾಗಿದ್ದು, ಘಟನೆ ಬಳಿಕ ನೌಷಾದ್ ತಲೆ ಮರೆಸಿಕೊಂಡಿದ್ದರಿಂದ ಈತನನ್ನು ಬಂಧಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆ ಇದೀಗ ಪೊಲೀಸರು ಆರೋಪಿ ಬಂಧನಕ್ಕೆ ರಿವಾರ್ಡ್ ವಾಂಟೆಡ್ ನೊಟೀಸ್ ಜಾರಿ ಮಾಡಿದ್ದಾರೆ.