ಮಂಗಳೂರು, ಎ15(SS): ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರಥಮವಾಗಿ ಕೋಮು ಸೌಹಾರ್ದ ಕ್ಷೇತ್ರವನ್ನಾಗಿ ಮಾಡಬೇಕಿದೆ ಎಂದು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅಭಿಪ್ರಾಯಪಟ್ಟಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಜಿಲ್ಲೆಯನ್ನು ಪ್ರಥಮವಾಗಿ ಕೋಮು ಸೌಹಾರ್ದ ಕ್ಷೇತ್ರವನ್ನಾಗಿ ಮಾಡಬೇಕಿದೆ. ಇದಕ್ಕೆ ಉದ್ಯೋಗ ಸೃಷ್ಟಿಯೇ ಪರ್ಯಾಯವಾಗಿದೆ. ಕೈಯಲ್ಲಿ ಕೆಲಸವಿಲ್ಲದೆ ಯುವ ಮನಸ್ಸುಗಳು ಅಡ್ಡದಾರಿ ಹಿಡಿಯುತ್ತಿದ್ದು, ಇದನ್ನು ಕೊನೆಗೊಳಿಸಬೇಕಿದೆ ಎಂದು ಹೇಳಿದ್ದಾರೆ.
ನನ್ನಲ್ಲಿ ಸ್ಪಷ್ಟ ಅಭಿವೃದ್ಧಿಯ ಕಲ್ಪನೆಯೊಂದಿದ್ದು, ಈ ಕ್ಷೇತ್ರದಲ್ಲಿ ಆರಿಸಿ ಬಂದಲ್ಲಿ ಅದನ್ನು ಜಾರಿ ಮಾಡುವ ಮೂಲಕ ಪ್ರವಾಸೋದ್ಯಮದಲ್ಲಿ ಹೆಸರು ತರುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಅಭಿವೃದ್ಧಿ ಪಥದಲ್ಲಿ ಸಾಗಿಸುವ ಮೂಲಕ ಮಂಗಳೂರಿನಲ್ಲಿ ನವಮಂಗಳೂರನ್ನು ನಿರ್ಮಿಸಿ, ಔದ್ಯೋಗಿಕ ಕ್ಷೇತ್ರವನ್ನಾಗಿ ಮಾಡಬೇಕಿದೆ. ಇದಕ್ಕೆ ಕೈಗಾರಿಕೋದ್ಯಮಿಗಳ ಸಹಕಾರದ ಅಗತ್ಯವಿದೆ. ವೈದ್ಯಕೀಯ, ಶಿಕ್ಷಣ, ಪ್ರವಾಸೋದ್ಯಮ, ಕೈಗಾರಿಕೆ ಮತ್ತಿತರ ಕ್ಷೇತ್ರದಲ್ಲಿ ಅಭಿವೃದ್ಧಿಗೆ ವಿಪುಲ ಅವಕಾಶಗಳಿದ್ದವು. ಆದರೆ ಇಲ್ಲಿನ ಸಂಸದರ ಇಚ್ಛಾಶಕ್ತಿಯ ಕೊರತೆಯಿಂದ ಮೂಲಸೌಕರ್ಯದಲ್ಲಿ ಯಾವುದೇ ಬೆಳವಣಿಗೆಯಾಗಲಿಲ್ಲ. ಅಭಿವೃದ್ಧಿಗೆ ಬಂದ ಅನುದಾನಗಳು ಮರಳಿ ಹೋಗಿವೆ. ಯಾವುದೇ ಸ್ಪಷ್ಟ ನಿರ್ಧಾರ ತಾಳುವಲ್ಲಿ ಆಸಕ್ತಿ ವಹಿಸದ ಕಾರಣ ಈ ಸಮಸ್ಯೆಯಾಗಿದೆ ಎಂದು ಹೇಳಿದರು.
ಒಂದು ವೇಳೆ ದಕ್ಷಿಣ ಕ್ನನಡ ಜಿಲ್ಲೆಯಲ್ಲಿ ನಾನು ಗೆದ್ದು ಬಂದರೆ ಖಂಡಿತಾ ಈ ಕ್ಷೇತ್ರದ ಅಭಿವೃದ್ಧಿ ಮಾಡುತ್ತಾನೆ. ನನ್ನಲ್ಲಿ ಅಭಿವೃದ್ಧಿಯ ಕಲ್ಪನೆಯೊಂದಿದ್ದು, ಅದರಂತೆ ಕ್ಷೇತ್ರವನ್ನು ಬೆಳೆಸುತ್ತೇನೆ ಎಂದು ಹೇಳಿದ್ದಾರೆ.