ಕಾಸರಗೋಡು, ಅ 26 (DaijiworldNews/HR): ನಗರ ಠಾಣಾ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ದಾಖಲೆಗಳಿಲ್ಲದ ಸುಮಾರು 33.24 ಲಕ್ಷ ರೂ. ಹಣವನ್ನು ವಶಕ್ಕೆ ತೆಗೆದುಕೊಂಡು ಇಬ್ಬರನ್ನು ಬಂಧಿಸಿದ್ದಾರೆ.
ಮುಹಮ್ಮದ್ ಮತ್ತು ಸುಲೈಮಾನ್ ಬಂಧಿತರು.
ನಗರದ ಜುವಲ್ಲರಿ ಪರಿಸರದಿಂದ ಇಬ್ಬರನ್ನು ಬಂಧಿಸಲಾಯಿತು. ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಲಾಗಿದೆ.
ಇನ್ನು ಬಂಧಿತರ ಬಳಿ ಯಾವುದೇ ದಾಖಲೆ ಪತ್ರ ಲಭಿಸಿಲ್ಲ. ನಗರದಲ್ಲಿ ಅಕ್ರಮ ಹಣಕಾಸಿನ ವ್ಯವಹಾರ ದ ಬಗ್ಗೆ ಮಾಹಿತಿ ಲಭಿ ಸಿದ್ದರಿಂದ ದಾಳಿ ಹಾಗೂ ತಪಾಸಣೆ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.