ಮಂಗಳೂರು, ಏ 14(SM): ತ್ರಿ ಹಂಗ್ರಿ ಮೆನ್ ನ ಫೂಡಿ ನಿಖಿಲ್ ಪೈ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಏಪ್ರಿಲ್ 14ರ ರವಿವಾರ ಕಾವೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪೊಲೀಸ್ ಮೂಲಗಳ ಪ್ರಕಾರ, ನಿಖಿಲ್ ಪೈ ಇಲಿಪಾಷನ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಏಪ್ರಿಲ್ 13ರಂದು ತನ್ನ ತಾಯಿಯೊಂದಿಗೆ ಜಗಳವಾಡಿದ್ದ. ಬಳಿಕ ಆತ ತನ್ನ ಮನೆಯಿಂದ ಹೊರ ನಡೆದಿದ್ದ. ಆದರೆ ಮರಳಿ ಮನೆಗೆ ಬಂದಿರಲಿಲ್ಲ.
ಮನೆ ಬಿಟ್ಟು ತೆರಳಿದ ಪುತ್ರ ಮರಳಿ ಬಾರದನ್ನು ಕಂಡ ತಾಯಿ ಗಾಬರಿಗೊಂಡು ರವಿವಾರ ಬೆಳಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದರು. ತಾಯಿ ನೀಡಿದ ದೂರಿನಂತೆ ಕಾರ್ಯಾಚರಣೆಗೆ ಇಳಿದ ಪೊಲೀಸರು ಶೋಧ ಕಾರ್ಯ ನಡೆಸಿದ್ದು, ತಾನು ನೆಲೆಸಿದ್ದ ವಸತಿ ಸಮುಚ್ಚಯದಲ್ಲೇ ಆತನ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ ಎಂದು ಮೂಲಗಳು ತಿಳಿಸಿವೆ.