ಬಂಟ್ವಾಳ, ಏ 14(SM): ಬಿ.ಸಿ. ರೋಡಿನಲ್ಲಿ ಸ್ಕಿಲ್ ಗೇಮ್ ನಡೆಯುತ್ತಿದ್ದ 2 ಕ್ಲಬ್ ಗಳಿಗೆ ಪೊಲೀಸ್ ದಾಳಿ ನಡೆದಿದೆ. ಘಟನೆಯಲ್ಲಿ 100ಕ್ಕೂ ಅಧಿಕ ಸ್ಕಿಲ್ ಗೇಮ್ ನಿರತ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಬಂಟ್ವಾಳದ ಎ ಎಸ್ ಪಿ ಸೈದುಲ್ ಅಡಾವತ್ ನೇತೃತ್ವದಲ್ಲಿ ದಾಳಿ ನಡೆದಿದೆ. ಬಿ.ಸಿ. ರೋಡ್ ನ 2 ಲಾಡ್ಜ್ ಗಳಲ್ಲಿ ಅಕ್ರಮವಾಗಿ ಸ್ಕಿಲ್ ಗೇಮ್ ನಡೆಯುತ್ತಿತ್ತು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಅದರಂತೆ ಬಂಟ್ವಾಳ ಎ ಎಸ್ಪಿ ನೇತೃತ್ವದಲ್ಲಿ ದಾಳಿ ನಡೆದಿದೆ. ಹಾಗೂ ಸ್ಕಿಲ್ ಗೇಮ್ ನಿರತ 100ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನು ಸ್ಥಳದಲ್ಲಿದ್ದ ನಗದು, ಮೊಬೈಲ್ ಫೋನ್ ಗಳು ಸೇರಿದಂತೆ ಸ್ಕಿಲ್ ಗೇಮ್ ಗೆ ಬಳಸಲಾದ ಪರಿಕರಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.