ಕಾಸರಗೋಡು, ಅ 25 (DaijiworldNews/MS): ರಾಜ್ಯದ ಗ್ರಾಮೀಣ ಪ್ರದೇಶದ 78 ಲಕ್ಷ ಕುಟುಂಬಗಳಿಗೆ. ಕುಡಿಯುವ ನೀರು ಒದಗಿಸುವುದು ರಾಜ್ಯ ಸರಕಾರದ ಗುರಿ ಎಂದು ಕೇರಳ ಜಲಸಂಪನ್ಮೂಲ ಸಚಿವ ರೋಶಿ ಅಗಸ್ಟಿನ್ ಹೇಳಿದರು. ಅವರು ಕಾಸರಗೋಡು ನಗರಸಭಾ ಹಾಗೂ ಚೆಮ್ಮಾಡ್ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಕಿಫ್ ಬಿ ಯೋಜನೆಯಡಿ ಜಾರಿಗೊಳಿಸುವ ಕುಡಿಯುವ ನೀರಿನ ಯೋಜನೆಯ ಶುದ್ಧೀಕರಣ ಘಟಕ ಉದ್ಘಾಟಿಸಿ ಮಾತನಾಡಿದರು.
ಕೇರಳದಲ್ಲಿ ವರ್ಷ ಕಳೆದಂತೆ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಜಲಜೀವನ್ ಯೋಜನೆಯಡಿ ಎಲ್ಲರಿಗೂ ಕುಡಿಯುವ ನೀರು ತಲುಪಿಸುವ ನಿಟ್ಟಿನಲ್ಲಿ ಕೇರಳ ರಾಜ್ಯ ಉತ್ತಮ ಸಾಧನೆ ಮಾಡಿದೆ. ಸರಕಾರ ಅಧಿಕಾರಕ್ಕೆ ಬರುವ ಮೊದಲು 17 ಲಕ್ಷ ಕುಟುಂಬಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿತ್ತು. ಆದರೆ ಈಗ 38 ಲಕ್ಷ ಮನೆಗಳಿಗೆ ಕುಡಿಯುವ ನೀರು ಒದಗಿಸಲು ಸಾಧ್ಯವಾಗಿದೆ. ಮುಂದಿನ ಎರಡು ವರ್ಷ ಗಳಲ್ಲಿ ಈ ಗುರಿ ಯನ್ನು 78 ಲಕ್ಷ ಹೆಚ್ಚಿಸಲಾಗುವುದು ಎಂದು ಹೇಳಿದರು. ಶಾಸಕ ಸಿ. ಎಚ್ ಕುಂಞಂಬು ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಶಾಸಕ ಎನ್. ಎ ನೆಲ್ಲಿ ಕುನ್ನು , ಜಿಲ್ಲಾಧಿಕಾರಿ ಕೆ. ಇಂಪಾಶೇಖರ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.
ಕೇರಳ ಜಲ ಪ್ರಾಧಿಕಾರದ ಸಹಾಯಕ ಇಂಜಿನಿಯರ್ ಎ.ವಿ ಪ್ರಕಾಶನ್, ಚೆಮ್ನಾಡ್ ಗ್ರಾಮ ಪಂಚಾಯತ್ ಅಧ್ಯಕ್ಷ ಸುಫೈಜಾ ಅಬೂಬಕ್ಕರ್, ಮುಳಿ ಯಾರ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಪಿ. ವಿ ಮಿನಿ ,ಕೇರಳ ಜಲ ಪ್ರಾಧಿಕಾರ ಮಂಡಳಿ ಸದಸ್ಯ ಉಷಾಲಯ ಶಿವರಾಜ ನ್,ಕಾರಡ್ಕ ಬ್ಲಾಕ್ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಕೆ ನಾರಾಯಣನ್, ಬ್ಲಾಕ್ ಪಂಚಾಯತ್ ಸದಸ್ಯ ಕು ಞಂಬು ನಂಬ್ಯಾರ್ ,ಮನ್ಸೂರ್ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತ ರಿದ್ದ ರು. ಕೇರಳ ಜಲ ಪ್ರಾಧಿಕಾರ ಯೂನಿಯನ್ ಪ್ರತಿನಿಧಿ ಎ. ಸುಧಾಕರನ್ , ಕೇರಳ ಜಲ ಪ್ರಾಧಿಕಾರ ನೌಕರರ ಸಂಘಟನೆಯ ಪ್ರತಿನಿಧಿ ಪ್ರದೀಪ್ ಪೂವಂಕರ ಮಾತನಾಡಿದರು. ಕೇರಳ ಜಲ ಪ್ರಾಧಿಕಾರದ ಇಂಜಿನಿಯರ್ ಸುದೀಪ್ ಸ್ವಾಗತಿಸಿ, ಸಹಾಯಕ ಇಂಜಿನಿಯರ್ ಸೀಮಾ ಸಿ ಗೋಪಿ ವಂದಿಸಿದರು.