ಬ್ರಹ್ಮಾವರ, ಅ 25 (DaijiworldNews/MS): ಬ್ರಹ್ಮಾವರ ಸಮೀಪದ ಕೊಕ್ಕರ್ಣೆ ಎಂಬಲ್ಲಿ ಅ.24 ರಂದು ನಸುಕಿನ ಜಾವ ಗರ್ಭಿಣೆಯೊಬ್ಬರು 108 ಆರೋಗ್ಯ ರಕ್ಷ ಕವಚದಲ್ಲಿ ನವಜಾತ ಶಿಶುವೊಂದಕ್ಕೆ ಜನ್ಮ ನೀಡಿದ ಘಟನೆ ಬೆಳಕಿಗೆ ಬಂದಿದೆ.
108 ಆರೋಗ್ಯ ರಕ್ಷ ಕವಚಕ್ಕೆ ಬಂದ ಕರೆ ಅನ್ವಯ ಘಟನಾ ಸ್ಥಳಕ್ಕೆ ಆಂಬುಲೆನ್ಸ್ ಬ್ರಹ್ಮಾವರ ತಾಲೂಕು ಶಿರೂರು ಮುದ್ದುಮನೆ ಗ್ರಾಮಕ್ಕೆ ತೆರಳಿತು.ಗರ್ಭಿಣೆ ರೇಖಾ (25) ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗ ಆಂಬುಲೆನ್ಸ್ ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
108 ಆರೋಗ್ಯ ರಕ್ಷ ಕವಚದ ಶುಶ್ರೂಕರಾದ ಪರಮೇಶ್ವರ ಚೇಲವಾದಿ ಅವರು ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ.ಪೈಲಟ್ ಚೇಂದ್ರಪ್ಪ ಉಪಸ್ಥಿತರಿದ್ದರು.
ತಾಯಿ ಮತ್ತು ಮಗುವನು ಸಮುದಾಯ ಆರೋಗ್ಯ ಕೇಂದ್ರ ಬ್ರಹ್ಮಾವರಕ್ಕೆ ದಾಖಲಾಗಿಸಲಾಗಿದ್ದು, ತಾಯಿ ಮತ್ತು ಮಗು ಆರೋಗ್ಯವಂತರಾಗಿದ್ದಾರೆ ಎಂದು ಅಲ್ಲಿಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.