ಮಂಗಳೂರು,ಅ 24 (DaijiworldNews/AK): 10 ದಿನಗಳ ಕಾಲ ನಡೆಯುವ ಮಂಗಳೂರು ದಸರಾವು ಅಕ್ಟೋಬರ್ 24 ಮಂಗಳವಾರದಂದು ಕುದ್ರೋಳಿ ದೇವಸ್ಥಾನದಿಂದ ಮೆರಗುಗೊಳಿಸುವ ಮೆರವಣಿಗೆಯೊಂದಿಗೆ ಅದ್ಧೂರಿಯಾಗಿ ಮುಕ್ತಾಯಗೊಂಡಿತು.
ನವದುರ್ಗೆಯರ ಮೆರವಣಿಗೆಯ ಬಳಿಕ ಗಣಪತಿ ಹಾಗೂ ಶಾರದೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ನವದುರ್ಗೆಯರು, ಗಣಪತಿ, ಆದಿಶಕ್ತಿ, ಶಾರದಾದೇವಿ, ಭ್ರಮಶ್ರೀ ನಾರಾಯಣ ಗುರುಗಳ ಮೂರ್ತಿಗಳು ಮಣ್ಣಗುಡ್ಡ, ನಾರಾಯಣಗುರು ವೃತ್ತ, ಲಾಲ್ಬಾಗ್, ಬಲ್ಲಾಳ್ಬಾಗ್, ಪಿವಿಎಸ್ ವೃತ್ತ, ಕೆಎಸ್ ರಾವ್ ರಸ್ತೆ, ಹಂಪನಕಟ್ಟೆ, ಗಣಪತಿ ಹೈಸ್ಕೂಲ್ ರಸ್ತೆ, ಕಾರ್ ಸ್ಟ್ರೀಟ್ ಮೂಲಕ ಮೆರವಣಿಗೆ ಸಾಗಿತು.
ದಸರಾ ಮಹೋತ್ಸವದ ವೈಭವದ ಶೋಭಾಯಾತ್ರೆಯಲ್ಲಿ 70ಕ್ಕೂ ಅಧಿಕ ಟ್ಯಾಬ್ಲೋಗಳು, ವೇಷಭೂಷಣಗಳು ಗಮನ ಸೆಳೆಯಿತು.ಅಕ್ಟೋಬರ್ 25 ರಂದು ಬೆಳಗ್ಗೆ ಕುದ್ರೋಳಿ ದೇವಸ್ಥಾನದಲ್ಲಿ ಮೆರವಣಿಗೆ ಮುಕ್ತಾಯವಾಗಲಿದೆ.