ಕಾರ್ಕಳ, ಅ 23 (DaijiworldNews/HR): ನಾರಾವಿ ಸಮೀಪ ಸಂಭವಿದ ರಸ್ತೆ ಅಪಘಾತದಲ್ಲಿ ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದ ಗಾಯಾಳುವನ್ನು ಕಾರ್ಕಳ 108 ಆರೋಗ್ಯ ರಕ್ಷ ಕವಚದ ಸಿಬ್ಬಂದಿಗಳು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗಾಯಾಳು ಮಹೇಶ್(45) ಎಂದು ತಿಳಿದುಬಂದಿದ್ದು, ತಾಲೂಕು ಸರ್ಕಾರಿ ಆಸ್ಪತ್ರೆಯಿಂದ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಇನ್ನು 108 ಆರೋಗ್ಯ ಕವಚ ಡಾಕ್ಟರ್ ಉದಯಕುಮಾರ ಸಲಹೆ ಮೇರೆಗೆ 108 ಆರೋಗ್ಯ ರಕ್ಷ ಕವಚದ ಈ ಎಂ ಟಿ ರಾಜಶೇಖರ್ ಪೈಲಟ್ ಮಲಗಿರಪ್ಪ ಕರ್ತವ್ಯ ನಿರ್ವಹಿಸಿದರು.