ಉಡುಪಿ, ಅ 22 (DaijiworldNews/SK): ಉಡುಪಿಯ ರೈಲು ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದಾಗ ರಕ್ಷಿಸಲ್ಪಟ್ಟಿದ್ದ ಗರ್ಭಿಣಿ ಮಹಿಳೆ ಉಡುಪಿ ಸರಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
ಮಹಿಳೆಯನ್ನು ಪಶ್ಚಿಮ ಬಂಗಾಲ ಮೂಲದ ಸುಲೇಕಾ ಎಂದು ಗುರುತಿಸಲಾಗಿದೆ.
ಕಳೆದ 3 ತಿಂಗಳ ಹಿಂದೆ, ಸಮಾಜಸೇವಕ ನಿತ್ಯಾನಂದ ಒಳಕಾಡು, ಹಾಗೂ ರೈಲ್ವೆ ಪೋಲಿಸರು, ಮಹಿಳಾ ಸಾಂತ್ವನ ಕೇಂದ್ರದ ಸಿಬ್ಬಂದಿಗಳು ಇಂದ್ರಾಳಿಯ ರೈಲು ನಿಲ್ದಾಣದಲ್ಲಿ ಅಸಹಾಯಕ ಪರಿಸ್ಥಿತಿಯಲ್ಲಿದಾಗ 7 ತಿಂಗಳ ಗರ್ಭಿಣಿ ಮಹಿಳೆಯನ್ನು ರಕ್ಷಿಸಿದ್ದರು. ಬಳಿಕ ನಿಟ್ಟೂರು ರಾಜ್ಯ ಮಹಿಳಾ ನಿಲಯದಲ್ಲಿ ಪುರ್ನವಸತಿ ಕಲ್ಪಿಸಿದ್ದರು. ಇವಾಗ ತಾಯಿ ಮಗು ಆರೋಗ್ಯವಾಗಿದ್ದು, ಮಹಿಳಾ ನಿಲಯದ ಪೋಷಣೆಯಲ್ಲಿದ್ದಾರೆ. ರಕ್ಷಿಸಲ್ಪಟ್ಟ ಮಹಿಳೆ ಮಾನಸಿಕ ಖಿನ್ನತೆಗೆ ಒಳಪಟ್ಟವರಂತೆ ಕಂಡು ಬಂದಿದ್ದಾರೆ.
ಇನ್ನೂ ತಾಯಿ ಮಗುವನ್ನು ಕುಟುಂಬಿಕರಿಗೆ ಸೇರಿಸ ಬೇಕಾಗಿದ್ದು, ಉಡುಪಿಯಲ್ಲಿರುವ ಬಂಗಾಲಿ ಸಂಘ ಸಂಸ್ಥೆಗಳು ಸಹಕರಿಸುವಂತೆಯೂ, ಸಂಬಂಧಿಕರು ತುರ್ತಾಗಿ ರಾಜ್ಯ ಮಹಿಳಾ ನಿಲಯದ ನಾಗರಿಕ ಸಹಾಯವಾಣಿಯನ್ನು ಸಂಪರ್ಕಿಸುವಂತೆ ಸಮಾಜಸೇವಕ ನಿತ್ಯಾನಂದ ಒಳಕಾಡು ಮಾಧ್ಯಮದ ಮೂಲಕ ವಿನಂತಿಸಿದ್ದಾರೆ.