ಉಡುಪಿ, ಅ.22(DaijiworldNews/AK): ನದಿಗೆ ಸ್ನಾನಕ್ಕೆಂದು ಹೋದ ಇಬ್ಬರು ನೀರು ಪಾಲಾದ ಘಟನೆ ಹೆಬ್ರಿ ಸಮೀಪದ ಕಬ್ಬಿನಾಲೆ ಮತ್ತಾವು ನಡೆದಿದೆ.
ಕರ್ಜೆ ನಿವಾಸಿ ಉಮೇಶ್ ಶೆಟ್ಟಿ (48) ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿ ಚಾರ ಹುರ್ತುರ್ಕೆ ನಿವಾಸಿ ಪ್ರಸ್ತುತ್ ಹೆಗ್ಡೆ (21) ಮೃತಪಟ್ಟವರು.
ಅ.21ರಂದು ಸಂಜೆ 3 ಗಂಟೆಗೆ ಸ್ನಾನಕ್ಕೆ ಹೋದವರು ಕಾಲು ಜಾರಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಸದ್ಯ ಘಟನೆ ಸಂಬಂಧ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.