ಉಡುಪಿ, ಅ.22(DaijiworldNews/AK): ವಿಶ್ವ ಪ್ರಸಿದ್ಧ ಪರ್ಯಾಯ ಮಹೋತ್ಸವಕ್ಕೆ ಅತಿಥಿ ಯಾಗಿ ಭಾಗವಹಿಸುವಂತೆ ಆಸ್ಟ್ರೇಲಿಯನ್ ಸರಕಾರದ ಎಂ ಪಿ . ಮತ್ತು ಉಪಮುಖ್ಯ ಮಂತ್ರಿ ಯಾಗಿರುವ ಪ್ರೂ ಕಾರ್ ರವರನ್ನು ಇಂದು ಸಿಡ್ನಿ ಮಹಾನಗರದಲ್ಲಿ ಶ್ರೀ ಪುತ್ತಿಗೆ ಮಠದ ಪ್ರತಿನಿಧಿಗಳು ಭೇಟಿಯಾಗಿ ಶ್ರೀಗಳ ಅಪೇಕ್ಷೆಯಂತೆ ಆಮಂತ್ರಣ ವನ್ನು ನೀಡಿದರು.
ಆಮಂತ್ರಣವನ್ನು ಗೌರವದಿಂದ ಸ್ವೀಕರಿಸಿದ ಸಚಿವೆ ವೈಭವದ ಪರ್ಯಾಯದ ಬಗ್ಗೆ 800 ವರ್ಷಗಳಿಂದ ಬಂದ ಅನೂಚಾನ ಪದ್ಧತಿ ಬಗ್ಗೆ ತಿಳಿದುಕೊಂಡು ಅಚ್ಚರಿಗೊಂಡರು .
ಶ್ರೀಗಳ ಕೋಟಿ ಗೀತಾ ಲೇಖನ ಯೋಜನೆಯ ಬಗ್ಗೆ ತಿಳಿದುಕೊಂಡು ಸಂತಸಗೊಂಡು ಪರ್ಯಾಯಕ್ಕೆ ಆಗಮಿಸುವ ಕುರಿತಂತೆ ಆಶಯ ವ್ಯಕ್ತಪಡಿಸಿದರು.
ಮಠದ ವತಿಯಿಂದ ಸಚಿವೆಯನ್ನು ಶಾಲು ಹೊದಿಸಿ ಪ್ರಸಾದ ನೀಡಿ ಸನ್ಮಾನಿಸಿದರು.
ಆಸ್ಟ್ರೇಲಿಯ ಸಚಿವೆ ಭಾರತೀಯ ಸಂಸೃತಿ ಬಗ್ಗೆ ವಿಶೇಷ ಆದರವನ್ನು ಹೊಂದಿದ್ದು ಅನಿವಾಸಿ ಭಾರತೀಯರಿಗೆ ವಿಶೇಷ ಪ್ರೋತ್ಸಾಹವನ್ನು ನೀಡುತ್ತಾರೆ. ಹೀಗಾಗಿ ಇಂದು ಶ್ರೀ ಪುತ್ತಿಗೆ ಮಠದ ಪ್ರತಿನಿಧಿಗಳು ಭೇಟಿಯಾಗಿ ಶ್ರೀಗಳ ಅಪೇಕ್ಷೆಯಂತೆ ಮುಂಬರುವ ವಿಶ್ವ ಪ್ರಸಿದ್ಧ ಪರ್ಯಾಯ ಮಹೋತ್ಸವಕ್ಕೆ ಅತಿಥಿ ಯಾಗಿ ಭಾಗವಹಿಸುವಂತೆ ಆಮಂತ್ರಣ ವನ್ನು ನೀಡಲಾಯಿತು .