ಮಂಗಳೂರು, ಅ 22 (DaijiworldNews/HR): ಮಂಗಳೂರು ಪೂರ್ವ ಠಾಣೆಯ ವ್ಯಾಪ್ತಿಯಲ್ಲಿ ಬೆಳಗಿನ ಜಾವ ವಾಕಿಂಗ್ ಮಾಡುತ್ತಿದ್ದ ಮಹಿಳೆಯ ಕರಿಮಣಿ ಎಗರಿಸಿದ ಘಟನೆ ನಡೆದಿದೆ.
ಬೆಳಗಿನ ಜಾವ 5:30 ಗಂಟೆಗೆ ನಗರದ ಮಹಿಳಾ ನಿವಾಸಿಯೋರ್ವರು ಎಂದಿನಂತೆ ತನ್ನ ಮನೆಯಾದ ಬಿಜೈ ನ್ಯೂ ರೋಡ್ ನಿಂದ ಬಾರತಿ ನಗರ ಕ್ರಾಸ್ ರಸ್ತೆಯಿಂದ ಬಿಜೈ ಚರ್ಚ್ ಕಡೆಗೆ ಪುಟ್ ಪಾತ್ ನಲ್ಲಿ ವಾಕಿಂಗ್ ಮಾಡುತ್ತಾ ಬಿಜೈ ಜಂಕ್ಷನ್ ಕಡೆಗೆ ಹೋಗುತ್ತಿದ್ದು ಈ ವೇಳೆ ಎದುರುಗಡೆಯಿಂದ ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ಸುಮಾರು ಮಹಿಳೆಯನ್ನು ನಿಲ್ಲಿಸಿ ಸವಾರನು ಬೈಕ್ ನಿಂದ ಇಳಿದು ಬೀಚ್ ಗೆ ಹೋಗುವ ರಸ್ತೆಯ ಬಗ್ಗೆ ಕೇಳಿದ್ದಾರೆ.
ಮಹಿಳೆ ಆಗ ನನಗೆ ಗೊತ್ತಿಲ್ಲ ಎಂದು ಹೇಳುತ್ತಿದ್ದಂತೆ ಮಹಿಳೆಯ ಕುತ್ತಿಗೆಯಲ್ಲಿದ್ದ 32 ಗ್ರಾಂ ತೂಕದ ಚಿನ್ನದ ಸರವನ್ನು ಎಳೆದುಕೊಂಡು ಪರಾರಿಯಾಗಿದ್ದಾರೆ.
ಈ ಬಗ್ಗೆ ಮಂಗಳೂರು ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.