ಮಂಗಳೂರು, ಅ 21 (DaijiworldNews/MS): ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಶನಿವಾರ ನಗರದ ಎಮ್ಮೆಕೆರೆಯಲ್ಲಿ ನಿರ್ಮಾಣಗೊಂಡಿರುವ ಮಂಗಳೂರು ಅಂತರಾಷ್ಟ್ರೀಯ ಈಜುಕೊಳವನ್ನು ಪರಿಶೀಲಿಸಿದರು.
ಈಜುಕೊಳ ಪರಿಸರವನ್ನು ವೀಕ್ಷಿಸಿದ ಸ್ಪೀಕರ್ ಅವರು ಇದುವರೆಗಿನ ಕಾಮಗಾರಿ ಪ್ರಗತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನವೆಂಬರ್ 24 ರಿಂದ 26ರ ವರೆಗೆ ಈಜು ಕೊಳದಲ್ಲಿ ರಾಷ್ಟ್ರೀಯ ಮಟ್ಟದ ಈಜು ಕ್ರೀಡಾಕೂಟ ನಡೆಯಲಿದ್ದು, ದೇಶದ ವಿವಿಧ ಕಡೆಯಿಂದ ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.
ಈಜುಕೊಳದ ಪರಿಸರದಲ್ಲಿ ಮತ್ತು ಹೊರಾಂಗಣದಲ್ಲಿ ಸೌಂದರ್ಯಯುತ ಕಾಮಗಾರಿ ನಡೆಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಶಾಸಕ ಹರೀಶ್ ಕುಮಾರ್, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವಾ, ಪಾಲಿಕೆ ಸದಸ್ಯರಾದ ಎ.ಸಿ ವಿನಯ್ ರಾಜ್, ನವೀನ್ ಡಿಸೋಜ, ಸ್ಮಾರ್ಟ್ ಸಿಟಿ ಜನರಲ್ ಮ್ಯಾನೇಜರ್ ಅರುಣಪ್ರಭಾ, ತೇಜೋಮಯ ಮತ್ತಿತರರು ಇದ್ದರು.