ಉಡುಪಿ: ಅ 21 (DaijiworldNews/AK): ಪೋಲಿಸ್ ಹುತಾತ್ಮರ ದಿನಾಚರಣೆಯನ್ನು ಜಿಲ್ಲಾ ಪೋಲಿಸ್ ವತಿಯಿಂದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕೇಂದ್ರ ಸ್ಥಾನ ಚಂದು ಮೈದಾನದಲ್ಲಿ ಅಯೋಜಿಸಲಾಯಿತು.
ಕಾರ್ಯಕ್ರದಮಲ್ಲಿ ಜಿಲ್ಲಾ ಸತ್ರ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಶಾಂತವೀರ್ ಶಿವಪ್ಪ ಅವರು ಪೋಲಿಸ್ ಹುತಾತ್ಮ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ, ಹುತಾತ್ಮ ಪೋಲಿಸರಿಗೆ ಗೌರವ ವಂದನೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅವರು ಗಡಿಯಲ್ಲಿ ಪ್ರಾಣ ತೆತ್ತು ಹುತಾತ್ಮರಾದ ಸೈನಿಕರ ಕುರಿತು ನಾವು ಸದಾ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಗಮನಿಸುತ್ತೇವೆ ಆದರೆ ಶಾಂತಿ ಕಾಲದಲ್ಲಿ ದೇಶದ ಒಳಗೆ ತಮ್ಮ ಕರ್ತವ್ಯ ನಿರ್ವಹಿಸುವ ವೇಳೆ ಹುತಾತ್ಮರಾದ ಪೋಲಿಸರ ಕುರಿತಾಗಿ ನಾವು ಗಮನ ನೀಡುವುದಿಲ್ಲ. ಜನರು ಕಾನೂನು ಪಾಲನೆ ಮಾಡುವ ಮೂಲಕ ಪೋಲಿಸರಿಗೆ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಸಹಕರಿಸಬೇಕು. ಪ್ರಸ್ತುತ ಪೋಲಿಸ್ ಇಲಾಖೆಗೆ ಆಧುನಿಕ ಶಸ್ತ್ರಾಸ್ತ್ರಗಳು ಬಂದಿದ್ದು, ಉತ್ತಮ ತರಬೇತಿ, ನುರಿತ ಸಿಬ್ಬಂದಿಗಳು ಕೂಡಾ ಇದ್ದಾರೆ. ಮುಂದಿನ ದಿನಗಳಲ್ಲಿ ಕರ್ತವ್ಯ ನಿರ್ವಹಣೆಯಲ್ಲಿ ಪೋಲಿಸರ ಮರಣ ಪ್ರಮಾಣ ಕಡಿಮೆಯಾಗಲಿ ಎಂದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ, ಜಿಲ್ಲಾ ಪಂಚಾಯತ್ ಸಿಇಒ ಪ್ರಸನ್ನ ಹೆಚ್, ಸಿಐಡಿ ಐಜಿಪ ಪ್ರವೀಣ್ ಮಧುಕರ್ ಪವಾರ್, ಕುಂದಾಪುರ ಉಪ ಆರಣ್ಯ ಸಂರಕ್ಷಣಾಧಿಕಾರಿ ಉದಯ್ ಎಮ್ ನಾಯಕ್, ಪೋಲಿಸ್ ಅಧೀಕ್ಷಕ ಡಾಕ್ಟರ್ ಅರುಣ್ ಕೆ, ಹೆಚ್ಚುವರಿ ಪೋಲಿಸ್ ಅಧೀಕ್ಷಕರಾದ ಎಸ್ ಟಿ ಸಿದ್ದಲಿಂಗಪ್ಪ, ಮತ್ತು ಇತರರು ಉಪಸ್ಥಿತರಿದ್ದು ಹುತಾತ್ನ ಪೋಲಿಸರಿಗೆ ಪುಷ್ಟ ನಮನ ಸಲ್ಲಿದರು.
ಇದೇ ವೇಳೆ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ 2 ನಿಮಿಷ ಮೌನ ಪ್ರಾರ್ಥನೆಯ ಮೂಲಕ ಹುತಾತ್ಮ ಪೋಲಿಸರಿಗೆ ಗೌರವ ನಮನ ಸಲ್ಲಿಸಲಾಯಿತು.