ಕಾರ್ಕಳ, ಅ 19 (DaijiworldNews/AK/RA):ಬೈಲೂರು ಸಮೀಪದ ಉಮಿ ಕಲ್ಲು ಬೆಟ್ಟದ ಮೇಲೆ ಪರಶುರಾಮ ಥೀಮ್ ಪಾರ್ಕ್ ನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಪರಶುರಾಮ ಮೂರ್ತಿ ಮಾಯವಾಗಿದ್ದು ಈ ದೃಶ್ಯ ಡ್ರೋಣ್ ಕ್ಯಾಮರಾ ಮೂಲಕ ಸೆರೆಯಾಗಿದೆ.
ಇನ್ನು ಈ ಹಿಂದೆ ಥೀರ್ಮ್ ಪಾರ್ಕ್ನ ಉದ್ಘಾಟನೆಗೂ ಮುನ್ನವೇ ಪರಶುರಾಮ ಮೂರ್ತಿ ಅಸಲಿಯೋ, ನಕಲಿಯೋ ಅನ್ನುವ ಆರೋಪಗಳು ಕೇಳಿ ಬಂದಿತ್ತು. ಇದರಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಎನ್ನಲಾಗಿತ್ತು. ಆ ಬಳಿಕ ಶಾಸಕ ಸುನೀಲ್ ಕುಮಾರ್ ವಿರುದ್ಧ ರಾಜಕೀಯ ಪಕ್ಷ ಹಾಗು ವಿವಿಧ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಮಾತ್ರವಲ್ಲ ಪ್ರತಿಭಟನೆಗಳೂ ಕೂಡ ನಡೆದಿತ್ತು.
ಇದೀಗ ಮತ್ತೆ ಕಾಂಗ್ರೆಸ್ ನಾಯಕ ಶುಭದ ರಾವ್ ಈ ಪ್ರಕರಣದಲ್ಲಿ ತಮ್ಮ ಹೋರಾಟವನ್ನು ಮುಂದುವರಿಸಿದ್ದಾರೆ. ಪರಶುರಾಮನ ಪ್ರತಿಮೆಯ ಒಂದು ಭಾಗ ಸಿಕ್ಕಿದ್ದು ಇದರಿಂದ ಸತ್ಯ ಅನಾವರಣವಾಗಿದೆ. ನಮ್ಮ ಎಂಎಲ್ ಸಿ ಮಂಜುನಾಥ್ ಭಂಡಾರಿಯವರು ಬೆಟ್ಟಕ್ಕೆ ಭೇಟಿ ಕೊಟ್ಟಾಗ ಇಲಾಖೆಯವರು ಬಂದಿದ್ದಾರೆ. ಮೂರ್ತಿಯ ಮೇಲೆ ಇರುವ ಟರ್ಪಾಲ್ ಗಳನ್ನು ತೆಗೆದಿದ್ದೇವೆ. ಅದು ಕಂಚು ಅಲ್ಲ ಫೈಬರ್ ನದ್ದು ಎಂದು ಆರೋಪಿಸಿದ್ದಾರೆ.
ಇದ್ರಲ್ಲಿ ಜನತೆಗೆ ಎಂತಹ ದ್ರೋಹ ಮಾಡಿದ್ದಾರೆ ಅನ್ನುವುದು ಗೊತ್ತಾಗುತ್ತದೆ ಎಂದು ಆರೋಪಿಸಿದ್ದಾರೆ.ಮೂರ್ತಿ ಕಾಲು ಭಾಗದಷ್ಟು ಕಂಚಿನದ್ದು ಆಗಿರಬಹುದು. ಆದ್ರೆ ಬಹುತೇಕ ಉಳಿದ ಎಲ್ಲ ಭಾಗಗಳು ಫೈಬರ್ ನದ್ದು ಆಗಿದೆ. ಇನ್ನೂ ಏನಾದ್ರೂ ಇವರಿಗೆ ಸಮರ್ಥನೆ ಮಾಡುವುದಕ್ಕೆ ಇದ್ದರೆ ಇನ್ನೂ ಕೂಡ ಸಮರ್ಥನೆ ಮಾಡಲಿ ಎಂದು ತಿರುಗೇಟು ನೀಡಿದ್ದಾರೆ.
ಜೊತೆಗೆ ಇಲ್ಲಿಯೇ ಪರುಶುರಾಮನ ಉಬ್ಬು ಶಿಲ್ಪಾಕೃತಿಯನ್ನು ನಿರ್ಮಾಣ ಮಾಡಲಾಗಿದೆ.ಆ ಪರಶುರಾಮನ ಉಬ್ಬು ಶಿಲ್ಪಾಕೃತಿಯ ಕಾಲಿನ ಕೆಳಗೆ ತುಳುನಾಡಿನ ದೈವಗಳ ಉಬ್ಬು ಶಿಲ್ಪಾಕೃತಿಯನ್ನು ನಿರ್ಮಾಣ ಮಾಡಿ ತುಳುನಾಡಿನ ಜನರ ಭಾವನೆಗಳಿಗೆ ಧಕ್ಕೆ ತಂದಿದ್ದು ದೈವಗಳೇ ಸುನೀಲ್ ಕುಮಾರ್ ಅವರ ವರ್ತನೆಗೆ ಉತ್ತರ ಕೊಟ್ಟಿದೆ.ಎಲ್ಲ ತಪ್ಪುಗಳು ಬಹಿರಂಗವಾಗಿದೆ. ಇನ್ನಾದ್ರೂ ಶಾಸಕರು ಸುಳ್ಳು ಹೇಳುವುದು ನಿಲ್ಲಿಸಿ ಜನತೆಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.