ಕಾಸರಗೋಡು, ಅ 18 (DaijiworldNews/HR): ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ತಲೆ ಬಡಿದ ಪರಿಣಾಮ ಬಸ್ಸು ಪ್ರಯಾಣಿಕ ವಿದ್ಯಾರ್ಥಿ ಮೃತಪಟ್ಟ ದಾರುಣ ಘಟನೆ ಇಂದು ಸಂಜೆ ನಗರ ಹೊರವಲಯದ ಕರಂದಕ್ಕಾಡ್ ನಲ್ಲಿ ನಡೆದಿದೆ.
ಮನ್ನಿಪ್ಪಾಡಿಯ ಮನ್ವಿತ್ (15) ಮೃತ ಪಟ್ಟ ವಿದ್ಯಾರ್ಥಿ.
ಈತ ಚೆಮ್ನಾಡ್ ಜಮಾ ಆತ್ ಹಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಯಾಗಿದ್ದು, ಶಾಲೆ ಬಿಟ್ಟು ಮನೆಗೆ ತೆರಳಲು ಮಧೂರಿಗೆ ತೆರಳುವ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ.
ಕರಂದಕ್ಕಾಡ್ ಬಳಿ ರಸ್ತೆ ಬದಿಯ ಕಂಬಕ್ಕೆ ತಲೆ ಬಡಿದಿದ್ದು, ಕುಸಿದು ಬಿದ್ದ ಮನ್ವಿ ತ್ ನನ್ನು ಆಸ್ಪತ್ರೆಗೆ ತಲಪಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತ ಪಟ್ಟಿದ್ದಾನೆ.
ಮೃತ ದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ಈ ಬಗ್ಗೆ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.