ಕುಂದಾಪುರ, ಅ 18 (DaijiworldNews/HR): ತಮ್ಮ ತಂದೆ ದಿ. ಅಂಪಾರು ಪಟೇಲ್ ರಾಮಣ್ಣ ಹೆಗ್ಡೆ ಹಾಗೂ ಕನಕ ರಾಮಣ್ಣ ಹೆಗ್ಡೆಯವರ ನೆನಪಿನಲ್ಲಿ ಕಂಡ್ಲೂರಿನ ರಾಮ್ ಸನ್ ಸರಕಾರಿ ಪ್ರೌಢಶಾಲೆಗೆ ರೋಟರಿ ಕ್ಲಬ್ ಮಿಡ್ ಟೌನ್ ಕುಂದಾಪುರ ಇದರ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ ಕಾವ್ರಾಡಿ ಮಂಗಳವಾರ ಸ್ಮಾರ್ಟ್ ಕ್ಲಾಸನ್ನು ಕೊಡುಗೆ ನೀಡಿದ್ದಾರೆ.
ಜಿಲ್ಲಾ ರೋಟರಿ ಗವರ್ನರ್ ಬಿ .ಸಿ ಗೀತಾ ಡಿಸ್ಟ್ರಿಕ್ಟ ಗವರ್ನರ್ 3182 ಅವರು ಶಾಲೆಗೆ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಅವರು, ಪ್ರಸ್ತುತ ಶೈಕ್ಷಣಿಕ ವರ್ಷಗಳಲ್ಲಿ ಆಧುನಿಕ ಶಿಕ್ಷಣ ಪದ್ಧತಿ ಮಕ್ಕಳ ಕಲಿಕೆಗೆ ಅನುಕೂಲ ಕಲ್ಪಿಸುತ್ತದೆ. ಈ ಸ್ಮಾರ್ಟ್ ಕ್ಲಾಸನ್ನು ಬಳಸಿಕೊಂಡು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವಂತಾಗಲಿ ಎಂದರು.
ಕೊಡುಗೆ ನೀಡಿದ ರೊ. ಸಂಪತ್ ಕುಮಾರ್ ಶೆಟ್ಟಿ ಕಾವ್ರಾಡಿ ಮಾತನಾಡಿ, ಸಂಸ್ಥೆಯ ಬಗ್ಗೆ ಇರುವ ಅಭಿಮಾನ ತಮಗೆ ಈ ಕೊಡುಗೆಯನ್ನು ನೀಡಲು ಪ್ರೇರಣೆಯಾಯಿತು ಎಂದರು. ಇದೇ ಸಂದರ್ಭದಲ್ಲಿ ರೋಟೇರಿಯನ್ ಶೇಖರ್ ಶೆಟ್ಟಿ ಇವರು ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು. ರೊಟೇರಿಯನ್ ಅಬ್ದುಲ್ ಬಶೀರ್ ಮಾಲಕರು ಪ್ಲೆಸೆಂಟ್ ಫರ್ನಿಚರ್ ಕುಂದಾಪುರ ಅವರು ಶಾಲೆಗೆ ಮೂರು ಗ್ರೀನ್ ಬೋರ್ಡ್ ಗಳನ್ನು ನೀಡುವುದಾಗಿ ತಿಳಿಸಿದರು.
ಶಾಲಾ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಸಾಮ್ರಾಟ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಸದಸ್ಯರು, ಎಸ್ ಡಿ ಎಂ ಸಿ ಸದಸ್ಯಪ್ರಕಾಶ್ಚಂದ್ರ ಶೆಟ್ಟಿ, ಸೆಲ್ಕೋ ಸಂಸ್ಥೆಯ ಮ್ಯಾನೇಜರ್ ಮಂಜುನಾಥ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಸುರೇಶ್ ಎಸ್ ಭಟ್ ಸ್ವಾಗತಿಸಿದರು. ರೊಟೇರಿಯನ್ ಸಚಿನ್ ಕುಮಾರ್ ಶೆಟ್ಟಿ ಹುಂಚ ವಂದಿಸಿದರು. ಶಿಕ್ಷಕರಾದ ಅಜಯ್ ಕುಮಾರ್ ಶೆಟ್ಟಿ ಶ್ರೀಗೋಪಾಲ್ ವಿ ಭಟ್ ನಿತ್ಯಾನಂದ ಶೆಟ್ಟಿ, ಲಕ್ಷ್ಮೀ ಶೆಟ್ಟಿ ಉಪಸ್ಥಿತರಿದ್ದರು. ರಜನಿ ಎಸ್ ಹೆಗಡೆ ನಿರೂಪಿಸಿದರು.