ಕೋಟ, ಅ 17 (DaijiworldNews/MS): ಹಂಗಾರಕಟ್ಟೆ ಹಾಗೂ ಕೋಡಿ ನಡುವೆ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡುವ ದಿಸೆಯಲ್ಲಿ ಮೊದಲ ಪ್ರಯತ್ನಕ್ಕೆ ಈ ಹೆಜ್ಜೆ ಇರಿಸಿದ್ದೇವೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.
ಮಂಗಳವಾರ ದ.ಕ., ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ನಿ. ಮಂಗಳೂರು ವತಿಯಿಂದ ಸಾರ್ವಜನಿಕರ ಅನುಕೂಲತೆಗಾಗಿ ಮತ್ತು ಮೀನುಗಾರರ ವ್ಯವಹಾರದ ಹಿತದೃಷ್ಟಿಯಿಂದ ವಾಹನಗಳನ್ನು ಕೊಂಡ್ಯೂಯ್ಯಲು ಅನುಕೂಲವಾಗುವಂತೆ 50 ಟನ್ ಸಾಮಥ್ರ್ಯದ ನೂತನ ಬಾರ್ಜ್ (ಫೆರ್ರಿಬೋಟ್ ) ಚಾಲನೆ ನೀಡಿ ಮಾತನಾಡಿ ಮೀನುಗಾರಿಕೆಯನ್ನೆ ನಂಬಿರುವ ಈ ಭಾಗದಲ್ಲಿ ಬಂದರು ಪ್ರದೇಶ ಸಾಕಷ್ಟು ವರ್ಷಗಳಿಂದ ಅಭಿವೃದ್ಧಿಯಿಂದ ವಂಚಿತಗೊಂಡಿದೆ. ಈ ನಿಟ್ಟಿನಲ್ಲಿ ಮೀನುಗಾರರ ಅನುಕೂಲಕ್ಕಾಗಿ ಬಾರ್ಜ್ ವ್ಯವಸ್ಥೆಯನ್ನು ಮೀನುಗಾರಿಕಾ ಫೆಡರೇಶನ್ ಮೂಲಕ ಅನುಷ್ಠಾನಗೊಳಿಸಲು ಮುಂದಾಗಿದ್ದು ಇಂದಿನಿಂದ ಇದರ ಕಾರ್ಯರೂಪ ಆರಂಭಗೊಳ್ಳಲಿದೆ, ಇದರಲ್ಲಿ ಲಾಭ ಪಡೆಯುವ ಉದ್ದೇಶ ಫೆಡರೇಶನ್ ಹೊಂದಿಲ್ಲ ಬದಲಾಗಿ ಮೀನಗಾರರ ಬೇಡಿಕೆ ಅನುಸಾರ ಒಂದು ಹೆಜ್ಜೆ ಇರಿಸಿದೆ. ಸಂಪರ್ಕದ ಕೊರತೆಯಿಂದ ಇಲ್ಲಿನ ಬೀಚ್ಗಳು ಅಭಿವೃದ್ಧಿಯಿಂದ ವಂಚಿತವಾಗಿದೆ ಈ ಎಲ್ಲಾ ವಿಚಾರನ್ನು ರಾಜ್ಯದ ಮೀನುಗಾರಿಕಾ ಸಚಿವರ ಗಮನಕ್ಕೆ ತರಲಾಗಿದೆ. ಅಭಿವೃದ್ಧಿ ಕುರಿತಂತೆ ಆಶಾಭಾವನೆ ವ್ಯಕ್ತಪಡಿಸಿದ್ದಾರೆ ಎಂದರು.
ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ವ್ಯವಸ್ಥಾಪಕ ನಿರ್ದೇಶಕರಾದ ದರ್ಶನ್ ಕೆ ಟಿ, ರಾಮಚಂದ್ರ ಕುಂದರ್, ದೇವಪ್ಪ ಕಾಂಚನ್, ಮತಿ ಉಷಾರಾಣಿ ಡಿ.ಕೆ, ಸುಧಾಕರ್, ಸುರೇಶ್ ಸಾಲ್ಯಾನ್ ,ಬೇಬಿ.ಹೆಚ್.ಸಾಲ್ಯಾನ್ ,ನ್ಯಾಯವಾದಿ ಮಂಜುನಾಥ , ಮಲ್ಪೆ ಮೀನುಗಾರಿಕಾ ಜಂಟಿ ನಿರ್ದೇಶಕರಾದ ವಿವೇಕ್ , ಉಡುಪಿ ಮೀನುಗಾರಿಕಾ ಉಪ ನಿರ್ದೇಶಕಿ ಅಂಜನಾದೇವಿ ,ಮೀನುಗಾರ ಮುಖಂಡ ಕೇಶವ ಕುಂದರ್ ಐರೋಡಿ ಗ್ರಾ.ಪಂ ಉಪಾಧ್ಯಕ್ಷೆ ಗೀತಾ ಶೆಟ್ಟಿ, ಸದಸ್ಯ ಬಿ.ಎಸ್.ನಟರಾಜ್ ಗಾಣಿಗ, ದುರ್ಗಾಪರಮೇಶ್ವರಿ ದೇವಸ್ಥಾನ ಕೋಡಿಬೆಂಗ್ರೆ ಜಯ ಎಸ್ ಕುಂದರ್ ಅಧ್ಯಕ್ಷ ನಾಗರಾಜ್ ಬಿ ಕುಂದರ್, ಕೋಡಿ ಗ್ರಾ.ಪಂ ಅಧ್ಯಕ್ಷ ಪ್ರಭಾಕರ ಮೆಂಡನ್ ,ಯಾಂತ್ರೀಕೃತ ಮೀನುಗಾರರ ಸಂಘ ಹಂಗಾರಕಟ್ಟೆ ಬೆಂಗ್ರೆ ಅಧ್ಯಕ್ಷ ರಾಜು ಎನ್ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.