ಉಡುಪಿ, ಅ 17 (DaijiworldNews/HR): ಇಡೀ ದೇಶದಾದ್ಯಂತ ದಶಾವತಾರಗಳಲ್ಲಿ ಆರನೇಯ ಅವತಾರ ಎಂದು ಪೂಜಿಸಲ್ಪಡುವ ತುಳುನಾಡಿನ ಸೃಷ್ಟಿಕರ್ತ ಪರಶುರಾಮನಿಗೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಘೋರ ಅಪಚಾರ, ಅವಮಾನ ಮಾಡಿದ್ದಾರೆ ಎಂದು ಶ್ರೀ ರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಮದಗ್ನಿ ಅರಾಧಕರು ಪರಶುರಾಮನ ಅರಾಧನೆ ಮಾಡುತ್ತಾರೆ. ಪರಶುರಾಮನ ಕೀರ್ತಿ, ಪ್ರಭಾವದಿಂದಾಗಿ ಅವರು ದೇವರು ಎನ್ನುವ ನಂಬಿಕೆ ಇದೆ. ತುಳುನಾಡಿನ ಸೃಷ್ಟಿಕರ್ತ ಎಂದೂ ಹೆಳುತ್ತಾರೆ. ತನ್ನ ಪರಾಕ್ರಮದಿಂದ ಸಮುದ್ರವನ್ನು ಹಿಂದೆ ಸರಿಸಿ ಭೂಮಿ ಸೃಷ್ಟಿಸಿದ ವ್ಯಕ್ತಿ, ಇಂತಹ ಪರಶುರಾಮನಿಗೆ ಅತ್ಯಂತ ಘೋರ ಅಪಚಾರ ಅಪಮಾನ ದ್ರೋಹ ಮಾಡಿದ ಸ್ವಾರ್ಥ, ನೀಚ ರಾಜಕಾರಣಿ ಸುನಿಲ್ ಕುಮಾರ್. ಸ್ವಾರ್ಥಕ್ಕೆ ದೇವರನ್ನೂ, ಭೃಷ್ಟಾಚಾರಕ್ಕೆ ದೇವಸ್ಥಾನವನ್ನು ಕೂಡಾ ಬಿಡದ ರಾಜಕಾರಣಿ. ಹಿಂದೂ ಸಂಸ್ಕ್ರತಿ, ಧರ್ಮ ಎಂದು ಬೆಳೆದ ವ್ಯಕ್ತಿ ಈ ಮಟ್ಟಕ್ಕೆ ಇಳಿಯುತ್ತಾರೆ ಎನ್ನುವುದು ನಾಚಿಕೆಗೇಡು. ಉಡುಪಿ ದೇವರ ನಾಡು, ದೈವ ದೇವರು ಆಧ್ಯಾತ್ಮ ಇರುವ ಜಿಲ್ಲೆ, ಇಂತಹ ಊರಿನಲ್ಲಿ ಇದು ನಡೆದಿರುವುದು ದುರದೃಷ್ಟಕರ. ಇನ್ನೂ ಸಹನೆ ಮಾಡಿಕೊಂಡು, ಅಧಿಕಾರಕ್ಕೆ ಅಂಟಿ ಕೊಂಡು ಕೂತಿರುವುದು ನಾಲಾಯಕ್. ಇಡೀ ದೇಶ, ಹಿಂದೂ ಸಮಾಜಕ್ಕೆ ಅಪಮಾನ ಮಾಡಿದ್ದಾರೆ. ಶಾಸಕ ಸ್ಥಾನಕ್ಕೆ ಕಳಂಕ ತಂದಿದ್ದೀರಿ. ಹಿಂದೂ ಸಮಾಜ ನಿಮ್ಮನ್ನು ಚಪ್ಪಲ್ಲಿ ತೆಗೆದುಕೊಂಡು ಬೆನ್ನು ಹತ್ತುತ್ತೆ. ನಿಮಗೆ ಚಪ್ಪಲಿಯಿಂದ ಪೂಜೆ ಆಗಬೇಕು ಎಂದರು.
ಎಲ್ಲಾ ಕಾಮಗಾರಿ ಮುಗಿಯಲು ಕನಿಷ್ಟ ಒಂದು ವರ್ಷ ಬೇಕು ಎಂದಿದ್ದರು ಇಂಜಿನಿಯರ್ ಆದರೆ ಕೇವಲ ೪೧ ದಿನಗಳ ಒಳಗೆ ಇದು ರಚನೆ ಆಗಿದೆ. ಇದು ಹೇಗಾಗುತ್ತೆ ಎನ್ನುವುದನ್ನು ಶಾಸಕರು, ಇಂಜಿನಿಯರ್ ಹೇಳಬೇಕು. ಆ ಜಾಗಕ್ಕೆ ಕಟ್ಟಡ, ಮೂರ್ತಿ ಕಟ್ಟಲು ಅನುಮತಿ ಇಲ್ಲ. ಕಂದಾಯ ಇಲಾಖೆ ಕಾರ್ಯದರ್ಶಿ ಪತ್ರ ಬರೆದಿದ್ದಾರೆ. ಡಿಸಿ, ತಹಶಿಲ್ದಾರರ್ ಆದೇಶ ಧಿಕ್ಕರಿಸಿ ಕಟ್ಟಡ ನಿರ್ಮಾಣ ಆಗಿದೆ. ಸಾಮಾನ್ಯ ವ್ಯಕ್ತಿ ಹೀಗೆ ಮಾಡಿದ್ದರೆ ಬುಲ್ಡೊಜರ್ ನಲ್ಲಿ ಬಿಸಾಡುತಿದ್ದರು. ಕಾನೂನು ಬಾಹಿರ ಕಟ್ಟಡಕ್ಕೆ ಮುಖ್ಯ ಮಂತ್ರಿ ಮುದ್ರೆ ಒತ್ತಿ ಹೋಗುತ್ತಾರೆ. ತನ್ನ ಗೆಲುವಿಗಾಗಿ ಪವಿತ್ರ ಥೀಮ್ ಪಾರ್ಕ್ ಅನ್ನು ಅಪವಿತ್ರ ಮಾಡಿದ್ದಾರೆ. ಮೂರ್ತಿಗೆ ಸಂಬಂಧಿಸಿದಂತೆ ಎಲ್ಲವೂ ತನಿಖೆ ಅಗಬೇಕು. ಆಮೇಲೆ ಕಾಮಗಾರಿ ಮುಂದುವರೆಸಿ. ಇದರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಿಲಾಪ ನಡೆಸುತ್ತಿದೆ ಎಂದಿದ್ದಾರೆ.
ಕಾಂಗ್ರೆಸ್ ಈ ಹಿಂದೆ ಬಿಜೆಪಿ ಭ್ರಷ್ಟಾಚಾರ ಬಯಲಿಗೆಳುಯುತ್ತಿವೆ ಎಂದವರು ಮೂರ್ತಿಯನ್ನು ಮಾಯ ಮಾಡಿದ್ದಾರೆ. ಕಾಂಗ್ರೆಸ್ ನವರು ಬಾಯ್ಮುಚ್ಚಿ ಕೂತಿದ್ದಾರೆ. ಉಸ್ತುವಾರಿ ಮಂತ್ರಿಗಳು ಸಂಪೂರ್ಣ ತನಿಖೆ ಮಾಡಿ ಕಾಮಗಾರಿಯನ್ನು ಸ್ಥಗಿತಗೊಳಿಸಬೆಕು. ಬಿಜೆಪಿ - ಕಾಂಗ್ರೆಸ್ ಒಳ ಒಪ್ಪಂದ ಆಗಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇದರಲ್ಲಿ ಸರಕಾರದ ಯಂತ್ರ ಕೂಡಾ ಭಾಗಿ ಆಗಿದೆ. ಡಿಸಿ, ತಹಶಿಲ್ದಾರ್, ನಿರ್ಮಿತಿ ಕೇಂದ್ರದ ಅಧಿಕಾರಿಗಳು ಭಾಗಿ ಆಗಿದ್ದಾರೆ. ಸುನಿಲ್ ಕುಮಾರ್ ರಾಜಿನಾಮೆ ಪಡೆದುಕೊಳ್ಳಿ, ಬಂಧಿಸಿ ತನಿಖೆ ನಡೆಸಿ. ಅಂದಿನ ಡಿಸಿ, ನಿರ್ಮಿತಿ ಕೇಂದ್ರದ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ. ಅಲ್ಲಿ ಹೋಟೇಲ್ ಗೆ ಅನುಮತಿ ಇಲ್ಲ. ಅನುಮತಿ ಇಲ್ಲದ ಹೊಟೆಲ್, ಕಟ್ಟಡ, ಮೂರ್ತಿ ಸಂಪೂರ್ಣ ತನಿಖೆ ಆಗಲಿ. ತನಿಖೆ ಆಗುವವರೆಗೆ ಅಲ್ಲಿ ಮತ್ತೆ ಮೂರ್ತಿ ಕೂರಿಸಲು ಅವಕಾಶ ಕೊಡುವುದಿಲ್ಲ. ನಮ್ಮ ಪ್ರಾಣ ಹೋದರೂ ಚಿಂತೆ ಇಲ್ಲ. ಈಗಿನ ಮೂರ್ತಿ ಯನ್ನು ಅವಮಾನ ಮಾಡಿದ್ದು ಕಾಂಗ್ರೆಸ್. ಪೋಲಿಸ್ ಇಲಾಖೆ ಇಟ್ಟುಕೊಂಡು ಅದನ್ನು ರಾತ್ರಿ ಸಾಗಿಸುತ್ತಾರೆ ಎಂದರೆ. ಸರಕಾರದ ಶಾಮೀಲು ಇಲ್ಲದೇ ಇದು ಸಾಧ್ಯವಿಲ್ಲ. ಶಾಸಕರಿಗೆ ನಿಮಗೆ ಮಾನ ಮರ್ಯದೆ ಇದ್ದರೆ ಕ್ಷಮೆ ಕೇಳಿ, ರಾಜೀನಾಮೆ ಕೊಡಿ ಎಂದು ಆಗ್ರಹಿಸಿದ್ದಾರೆ.
ಈ ಸಂಧರ್ಭದಲ್ಲಿ ರಾಜ್ಯ ಅಧ್ಯಕ್ಷರಾದ ಗಂಗಾಧರ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರು, ಉಡುಪಿ ಜಿಲ್ಲಾಧ್ಯಕ್ಷ ಜಯರಾಮ ಅಂಬೆಕ್ಲಲು, ಮತ್ತು ಇತರರು ಉಪಸ್ಥಿತರಿದ್ದರು.