ಮೂಡುಬಿದಿರೆ, ಅ 17 (DaijiworldNews/HR): ಕ್ರಿಕೆಟ್ ವಿಶ್ವಕಪ್ ಮ್ಯಾಚ್ ನ ಬೆಟ್ಟಿಂಗ್ ದಂಧೆಯ ಪ್ರಕರಣ ಬೇಧಿಸಿರುವ ಮೂಡುಬಿದ್ರೆ ಪೊಲೀಸರು ಬೆಟ್ಟಿಂಗ್ ನಲ್ಲಿ ನಿರತರಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮೂಡಬಿದಿರೆ ನಿವಾಸಿಗಳಾದ ಸುಖೇಶ್ ಆಚಾರ್ಯ ಮತ್ತು ಪುರಂದರ ಕುಲಾಲ್ ಎಂದು ಗುರುತಿಸಲಾಗಿದೆ.
ಮೂಡಬಿದರೆಯ ಮಾರ್ಪಾಡಿ ಗ್ರಾಮದ ಒಂಟಿಕಟ್ಟೆ ಎಂಬಲ್ಲಿರುವ ಕಡಲಕೆರೆ ಪಾರ್ಕ್ ನಲ್ಲಿ ಸುಖೇಶ್ ಆಚಾರ್ಯ ಎಂಬಾತನು ಪುರಂದರ್ ಎಂಬಾತನಿಂದ ಹಣವನ್ನು ಪಡೆದು allpaanel.com/m/home ಎಂಬ ಮೋಬೈಲ್ ವೆಬ್ ಸೈಟ್ ನಲ್ಲಿ ಕ್ರಿಕೇಟ್ ಬೆಟ್ಟಿಂಗ್ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯಂತೆ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ಸುಖೇಶ್ ಆಚಾರ್ಯ ಎಂಬಾತನನ್ನು ಹಿಡಿದು ವಿಚಾರಣೆ ನಡೆಸಿದಾಗ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿರುವುದಾಗಿ ತಿಳಿಸಿದ್ದಾನೆ.
ಆರೋಪಿಗಳನ್ನು ಬಂಧಿಸಿ ನ್ಯಾಯಾಲಕ್ಕೆ ಹಾಜರುಪಡಿಸಿದ್ದು, ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಾಗಿದೆ.