ಕಾರ್ಕಳ, ಅ 16 (DaijiworldNews/HR): ಕಾರ್ಕಳದ ಪರಶುರಾಮ ಮೂರ್ತಿಯ ಪ್ರತಿಷ್ಟಾಪನೆಯಲ್ಲಿ ಕಂಚಿನ ಬದಲು ಫೈಬರ್ ಮೂರ್ತಿಯನ್ನು ಪ್ರತಿಷ್ಟಾಪಿಸಿದ ಕಾರ್ಕಳ ಶಾಸಕ ಸುನಿಲ್ ಕುಮಾರ್ ವಿರುದ್ದ ಉಡುಪಿ ಜಿಲ್ಲಾ ಕಾಂಗ್ರೆಸ್, ಕಾರ್ಕಳ ಕಾಂಗ್ರೆಸ್ ವತಿಯಿಂದ ಪರಶುರಾಮ ಥೀಮ್ ಪಾರ್ಕ್ ಬಳಿ ಬೃಹತ್ ಪ್ರತಿಭಟನಾ ಸಭೆ ಮತ್ತು ಜಾಥಾ ನಡೆಯಿತು.
ಕಾರ್ಕಳದ ಪುಲ್ಕೇರಿ ಬೈಪಾಸ್ ನಿಂದ ಆರಂಭಗೊಂಡ ಪ್ರತಿಭಟನಾ ಜಾಥಾದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದರು.
ಈ ವೇಳೆ ಮಾತನಾಡಿದ ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೋಳಿ, ಸತ್ಯವನ್ನು ಯಾವತ್ತೂ ಮುಚ್ಚಿಡಲು. ಸಾಧ್ಯವಿಲ್ಲ ಆ ಸತ್ಯ ಅನಾವರಣಾ ಆಗೇ ಆಗುತ್ತದೆ. ಸಿಟಿ ರವಿ ಅಣ್ಣ ಕಾರ್ಕಳದ ಶಾಸಕರು ತಮ್ಮ. ಅವರು ಅಲ್ಲಿ ವಿವೇಕನಂದರ ಮೂರ್ತಿಯನ್ನು ಉರುಳಿಸಿದರು ಚುನಾವಣೆಯಲ್ಲಿ ಸೋತು ಹೋದರು ಇವರು ಇಲ್ಲಿ ಪರಶುರಾಮ ಮೂರ್ತಿಗೆ ಅವಮಾನ ಮಾಡಿದ್ದಾರೆ ಇವರೂ ಮುಂದಿನ ಚುನಾವಣೆಯಲ್ಲಿ ಸೋತು ಹೋಗುತ್ತಾರೆ. ಇದು ಕೇವಲ ಭೃಷ್ಟಾಚಾರದ ವಿಚಾರ ಅಲ್ಲ, ಇಲ್ಲಿ ನಮ್ಮೆಲ್ಲರ ಭಾವನೆಯ ಪ್ರಶ್ನೆ ಇದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ ನ ಪ್ರತಿಮೆಯನ್ನು ಕಂಚಿನ ಪ್ರತಿಮೆ ಎಂದು ಬಿಂಬಿಸಿ ಮಾತ್ರವಲ್ಲದೇ ಭಜನಾ ಮಂಡಳಿಗಳನ್ನು ಬಳಸಿಕೊಂಡು, ಮೆರವಣಿಗೆ ಮಾಡಿಸಿ, ಸರಕಾರದ ಸುಂಆರು 60 ಲಕ್ಷಕ್ಕೂ ಮಿಕ್ಕಿ ಹಣವನ್ನು ಖರ್ಚು ಮಾಡಿ ಸುನಿಲ್ ಕುಮಾರ್ ಅವರ ವೈಯುಕ್ತಿಕ ಪ್ರತಿಷ್ಟೆಯನ್ನು ಮೆರೆಸುವ ದೃಷ್ಟಿಯಿಂದ ಅವರು ಮಾಡಿರುವ ದ್ರೋಹ ಸಂಸ್ಕ್ರತಿಗೆ ಮಾಡಿರುವ ದ್ರೋಹ ಮತ್ತು ಕಾರ್ಕಳದ ಜನರ ನಂಬಿಕೆಗೆ ಮಾಡಿರುವ ದ್ರೋಹ ಮಾತ್ರವಲ್ಲದೇ ಅಂದಿನ ಮುಖ್ಯಮಂತ್ರಿಗಳಿಂದ ಇದನ್ನು ಉದ್ಘಾಟಿಸಿ ಸ್ವತಹ ತಮ್ಮ ನಾಯಕರಿಗೂ ಅವರು ಮೋಸ ಮಾಡಿದ್ದಾರೆ,. ಇವರ ಅಣ್ಣ ಸಿಟಿ ರವಿ ಕೂಡಾ ಚಿಕ್ಕಮಗಳೂರಿನ ಬಸವನಹಳ್ಳಿ ಕೆರೆಯಲ್ಲಿ ಸ್ವಾಮಿ ವಿವೇಕಾನಂದರ ಮಕಲಿ ಪ್ರತಿಮೆಯನ್ನು ಸ್ಥಾಪಿಸಿ ತದನಂತರ ರಾತ್ರೋರಾತ್ರಿ ಅದನ್ನು ಪ್ರತಿಮೆಯನ್ನು ಒಡೆದು ಹಾಕಿದರು. ಇದರಿಂದಾಗಿ ಬಿಜೆಪಿಯವರು ವಿಗ್ರಹ ಭಂಜಕ ಸಂಸ್ಕ್ರತಿಯವರು ಎಂದು ತಿಳಿಯುತ್ತದೆ ಎಂದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ಮಾತನಾಡಿ "ಸುನಿಲ್ ಕುಮಾರ್ ಜನರ ನಂಬಿಕೆ, ಭಾವನೆಗಳ ಜೊತೆ ಚೆಲ್ಲಾಟವಾಡಿದ್ದಾರೆ. ಇಲ್ಲಿಯ ಜಾಗದ ಕುರಿತಾಗಿ ಕೂಡಾ ಸಮಸ್ಯೆ ಇದೆ. ಅದು ಯಾವುದೂ ಕೂಡಾ ನಿವಾರಣೆ ಆಗದೇ ಏಕಾಏಕಿಯಾಗಿ ಪ್ರತಿಮೆ ನಿರ್ಮಾಣ ಆಗಿದೆ. ನಮ್ಮ ಸಂಸ್ಕ್ರತಿ, ನಂಬಿಕೆ ಸಂಪ್ರದಾಯಕ್ಕೆ ದ್ರೋಹ ಬಗೆಯುವ ಕೆಲಸ ಬಿಜೆಪಿ ಸರಕಾರದಿಂದ ಆಗಿದೆ. ಇದು ತನಿಖೆ ಮಾಡಬೇಕು ಎಂದು ಈಗಾಗಲೇ ಮುಖ್ಯಮಂತ್ರಿ, ಉಸ್ತುವಾರಿ ಸಚಿವರು ಮತ್ತು ಪ್ರವಾಸೋದ್ಯಮ ಸಚಿವರಿಗೆ ಮನವಿ ನೀಡಲಾಗಿದೆ” ಎಂದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಮುಖಂಡ ಮಿಥುನ್ ರೈ ಮಾತನಾಡಿ “ಕಳೆದ ಒಂದು ತಿಂಗಳಿನಿಂದ ಪರಶುರಾಮನ ಪ್ರತಿಮೆ ಕಂಚಿನದ್ದು ಅಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಯುತ್ತಿದೆ. ನಾವು ಕೂಡಾ ಮಂಗಳೂರು ವಿಮಾನ ನಿಲ್ದಾಣಕ್ಕೆ ಪರಶುರಾಮ ಅಥವಾ ಕೋಟಿ ಚೆನ್ನಯರ ಹೆಸರಿಡಬೇಕೆಂದು ಪ್ರಯತ್ನ ಮಾಡುತ್ತಿದ್ದೇವೆ ಏಕೆಂದರೆ ಅದು ಶಾಶ್ವತವಾಗಿ ಉಳಿದು ನಮ್ಮ ಮುಂದಿನ ಪೀಳಿಗೆಗೆ ಅವರ ಕುರಿತಾಗಿ ತಿಲಿಯಬೇಕೆಂಬ ಉದ್ದೇಶದಿಂದ ದನ್ನು ಮಾಡುತ್ತಿದ್ದೇವೆ. ಇದು ಶಾಶ್ವತವಾಗಿ ಉಳಿಯಬೇಕಾದ ಪ್ರಕ್ರಿಯೆ. ನಾವು ನೈಜ ಹಿಂದೂಗಳು, ರಾಮನ ಪರಮಭಕ್ತರು. ಮಹಾತ್ಮಾಗಾಂಧಿಯವರ ಬಾಯಲ್ಲಿ ಯಾವತ್ತೂ ಹೇ ರಾಮ್ ಎಂಬ ಸ್ಮರಣೆ ಇರುತಿತ್ತು, ಮಹಾತ್ಮಾ ಗಾಂಧಿಯನ್ನು ಸ್ಮರಿಸುವುದು ಕಾಂಗ್ರೆಸ್ ನವರು, ಗಾಂಧಿಯನ್ನು ಕೊಂದಿದ್ದು ನಾಥೂರಾಮ್ ಗೋಡ್ಸೆ, ಗೋಡ್ಸೆ ಸ್ಮರಣೆ ಮಾಡುವವರು ಹಿಂದೂಗಳು ಅಲ್ಲ. ವತ್ತು ಸುನಿಲ್ ಕುಮಾರ್ ಮಾಡಿರುವ ಕೆಲಸ ಪರಶುರಾಮ ಸೃಷ್ಟಿಯಲ್ಲಿ ಹುಟ್ಟಿರುವ ಸರ್ವರಿಗೂ ಮೋಸ ಮಾಡುವ ಕೆಲಸ ಆಗಿದೆ, ಇದನ್ನು ಈಶ್ವರ ದೇವರು ಖಂಡಿತವಾಗಿ ಕ್ಷಮಿಸುವುದಿಲ್ಲ. ನವರಾತ್ರಿಯ ಪರ್ವ ಕಾಲದಲ್ಲಿ ಬಿಜೆಪಿ ಪಕ್ಷದ ಶಾಸಕನಾಗಿರುವ ಸುನಿಲ್ ಕುಮಾರ್ ನಂತಹವರ ಸಮರ ಆಗಬೇಕು. ಬಿಜೆಪಿಯವರಲ್ಲಿ ನಿಜವಾದ ಹಿಂದುತ್ವ ಇದ್ದಲ್ಲಿ ಈ ಹೋರಾಟದಲ್ಲಿ ಅವರು ಕೂಡಾ ನಮ್ಮ ಜೊತೆ ಸೇರಬೇಕು. ಈ ಕಾಮಗಾರಿ ನಡೆಸಿದ ನಿರ್ಮಿತಿ ಕೇಂದ್ರದ ಇಂಜಿನಿಯರ್ ಅನ್ನು ಕೂಡಾ ಸಸ್ಪೆಂಡ್ ಮಾಡಬೇಕು. ಬಿಜೆಪಿಯವರಿಗೆ ಗೌರವ ಇದ್ದರೆ ಸುನಿಲ್ ಕುಮಾರ್ ರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದರು.
ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಮಾಧ್ಯಮದವರೊಂದಿಗೆ ಮಾತನಾಡಿ “ಇಡೀ ದಕ್ಷಿಣ ಭಾರತಕ್ಕೆ ಕಪ್ಪು ಚುಕ್ಕೆ ಯಾಗುವಂತಹ ಘಟನೆ ನಮ್ಮ ಕಾರ್ಕಳದಲ್ಲಿ ನಡೆದಿದೆ. ಕಾರ್ಕಳದಲ್ಲಿ 14 ನೇ ಶತಮಾನದಲ್ಲಿ ನಿರ್ಮಿಸಿದ ಗೋಮ್ಮಟೇಶ್ವರ ಇನ್ನೂ ಹಾಗೇಐಏ ಇದೆ. ಆದರೆ ಇವತ್ತು 15 ಟನ್ 33 ಅಡಿಯ ಕಂಚಿನ ಪ್ರತಿಮೆಯಲ್ಲಿ ನಮ್ಮ ಮಾನ ಮರ್ಯಾದೆ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣ ಆಗಿದೆ. ಧರ್ಮವೇ ಮೊದಲು ಎಂದವರು ಧರ್ಮಕ್ಕೆ ಅಪಚಾರ ಮಾಡಿದರು. ಚುನಾವಣಾ ಗಿಮಿಕ್ ಗಾಗಿ ಇದೆಲ್ಲವನ್ನೂ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇಲ್ಲಿ ಪ್ರವಾಸೋದ್ಯಮ ಬೇಳಿಯಬೇಕು. ಕೇವಲ ರಾಜಕೀಯಕ್ಕಾಗಿ ಇದನ್ನು ಮಾಡಿರುವುದಕ್ಕೆ ಬೇಸರ ಇದೆ” ಎಂದರು.
ಪ್ರತಿಭಟನಾ ಸಭೆಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ನಾಯಕರಾದ ಪ್ರಸಾದ್ ರಾಜ್ ಕಾಂಚನ್, ದಿನೇಶ್ ಹೆಗ್ಡೆ ಮೊಳಹಳ್ಳಿ, ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಂಶುಮಾನ್, ಕಾರ್ಕಳ ಕಾಂಗ್ರೆಸ್ ಮುಖಂಡರಾದ ಡಿ ಆರ್ ರಾಜು, ಯುವ ಕಾಂಗ್ರೆಸ್ ಅಧ್ಯಕ್ಷರಾದ ದೀಪಕ್ ಕೋಟ್ಯಾನ್ ಇನ್ನಾ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ ಕಿಶನ್ ಹೆಗ್ಡೆ ಕೊಳ್ಕೆಬೈಲು ಮತ್ತು ಇತರರು ಉಪಸ್ಥಿತರಿದ್ದರು.