ಮಂಗಳೂರು,ಏ13(AZM): ಮಂಗಳೂರಿನಲ್ಲಿ ನಡೆದ ಪ್ರಧಾನಿ ಮೋದಿ ರ್ಯಾಲಿಗೆ ಆಗಮಿಸಿ ಹಿಂದಿರುಗುತ್ತಿದ ಬಸ್ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕರ ಮಧ್ಯೆ ವಾಗ್ವಾದ ನಡೆದು ಗುಂಪು ಘರ್ಷಣೆಯುಂಟಾಗಿ ಸ್ಥಳದಲ್ಲಿ ಉದ್ರೀಕ್ತ ವಾತಾವರಣ ನಿರ್ಮಾಣವಾದ ಘಟನೆ ಕುತ್ತಾರು ಮದನಿ ನಗರದಲ್ಲಿ ಇಂದು ನಡೆದಿದೆ.
ಮಂಗಳೂರಿನಲ್ಲಿ ನಡೆದ ಪ್ರಧಾನಿ ಮೋದಿ ರ್ಯಾಲಿಯಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ಬಸ್ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನಿಗೆ ಗಾಯವುಂಟಾಗಿ,ಚಾಲಕರ ನಡುವೆ ವಾಗ್ವಾದ ನಡೆದಿದ್ದು, ವಾಗ್ವಾದ ತಾರಕ್ಕಕ್ಕೇರಿ ಗುಂಪು ಘರ್ಷಣೆ ಕಲ್ಲು ತೂರಾಟವುಂಟಾಗಿದೆ. ಹಾಗಾಗಿ ಮದನಿ ನಗರದ ಯುವಕರಿಂದ ಬಸ್ಸಿಗೆ ಕಲ್ಲು ತೂರಾಟ ಹಾಗೂ ಬಸ್ಸಿನಲ್ಲಿದ್ದ ಯುವಕರಿಂದಲೂ ಪ್ರತಿ ಹಲ್ಲೆ ನಡೆದು ಸ್ಥಳದಲ್ಲಿ ಉದ್ರೀಕ್ತ ವಾತಾವರಣ ನಿರ್ಮಾಣಗೊಂಡಿದೆ.ಈ ಸಂದರ್ಭ ಬಸ್ಸಿನಲ್ಲಿದ್ದ ಕಾರ್ಯಕರ್ತರು ಮೋದಿ ಪರ ಘೋಷಣೆ ಕೂಗಿದ್ದಾರೆ.
ಘರ್ಷಣೆಯಲ್ಲಿ ಇಬ್ಬರಿಗೆ ಗಾಯವಾಗಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ಸಿನಲ್ಲಿದ್ದ ಬಿಜೆಪಿ ಕಾರ್ಯಕರ್ತರಿಗೂ ಗಾಯಗಳಾಗಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಠಾಣೆಯಲ್ಲಿ ಕೇಸು ದಾಖಲಾಗಿದೆ.