ಕಾರ್ಕಳ, ಅ 14 (DaijiworldNews/HR): ಕಾರ್ಕಳ ತಾಲೂಕಿನ ಬೈಲೂರು ಉಮಿಕಲ್ಲು ಗುಡ್ಡದಲ್ಲಿ ನಿರ್ಮಾಣ ಮಾಡಲಾದ ಪರಶುರಾಮ ಥೀಮ್ ಪಾಕ್೯ ಗೊಂದಲದ ಗೂಡಾಗಿ ಪರಿಣಮಿಸಿದೆ. ಕಾಮಗಾರಿ ಪ್ರಾರಂಭದಿಂದಲೂ ಒಂದಲ್ಲ ಒಂದು ರೀತಿಯ ಗೊಂದಲ ಸೃಷ್ಟಿ ಯಾಗುತ್ತಾ ಬಂದಿದ್ದು ಇದೀಗ ಇಂದು ವಿಗ್ರಹ ಏಕಾಏಕಿ ಮಾಯವಾಗುವುದು ಮತ್ತಷ್ಟು ಅಕ್ರೊಶಕ್ಕೆ ಕಾರಣವಾಗಿದೆ. ಪರಶುರಾಮನ ವಿಗ್ರಹದ ಪಾದ ಹೊರತುಪಡಿಸಿ ಉಳಿದು ಬಾಗ ಕಾಣೆಯಾಗಿದ್ದು, ಈ ಕುರಿತು ದಿವ್ಯಾ ನಾಯಕ್ ವಿಗ್ರಹ ವಿಗ್ರಹ ಪತ್ತೆ ಗಾಗಿ ಕಾರ್ಕಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೈಲೂರಿನ ಉಮಿಕಲ್ಲು ಬೆಟ್ಟದ ಮೇಲೆ ನಿಂತಿದ್ದ ಪರಶುರಾಮನ ಮೂರ್ತಿಯು ಕಾಣುತ್ತಿಲ್ಲ, ಕೊಡಲಿ, ಬಿಲ್ಲು ಸಹ ಕಾಣುತ್ತಿಲ್ಲ ಹಾಗಾದ್ರೆ ರಾತ್ರೋ ರಾತ್ರಿ ಈ ಪರಶುರಾಮನ ಕಳ್ಳತನ ಮಾಡಲಾಯಿತಾ? ಆ ಮೂರ್ತಿಯನ್ನೇ ತೆರವು ಮಾಡಲಾಯಿತಾ? ಎಂಬ ಸಾಕಷ್ಟು ಪ್ರಶ್ನೆಗಳಿಗೆ ಶಾಸಕ ಸುನಿಲ್ ಕುಮಾರ್ ಉತ್ತರ ಸಿಗಬೇಕಾಗಿದೆ.
ಉಮಿಕಲ್ಲು ಗುಡ್ಡ ದಲ್ಲಿ 33 ಅಡಿಯ ಎತ್ತರದ ಪರಶುರಾಮನ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು ಇದೀಗ ಡ್ರೋಣ್ ಕ್ಯಾಮರ ಮೂಲಕ ಮೂರ್ತಿ ಮಾಯವಾಗಿರುವ ಬಹಿರಂಗವಾಗಿದೆ.
ಬೈಲೂರಿನ ಉಮ್ಮಿಕಲ್ಲ್ ಬೆಟ್ಟದ ಮೇಲೆ ನಿರ್ಮಾಣಗೊಂಡ ಪರಶುರಾಮ ಥೀಮ್ ಪಾರ್ಕಿನಲ್ಲಿ ಕಂಚಿನ ಪ್ರತಿಮೆ ನಿರ್ಮಾಣ ಮಾಡಲಾಗಿದೆ ಎಂದು ಹೇಳಿ ಪೈಭರ್ ಪ್ರತಿಮೆ ನಿರ್ಮಿಸಿ ಜನತೆಗೆ ನಂಬಿಕೆ ದ್ರೋಹವೆಸಗಿದ ಶಾಸಕ ಸುನೀಲ್ ಕುಮಾರ್ ವಿರುದ್ದ ಕಾರ್ಕಳ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಲಿದೆ. ಸೋಮವಾರ ಪ್ರತಿಭಟನಕಾರರು ಕಾರ್ಕಳ ಪುಲ್ಕೇರಿ ಬೈಪಾನ್ ವೃತ್ತದಿಂದ ಒಟ್ಟಾಗಿ ವಾಹನದಲ್ಲಿ ತೆರಳಿ ಬೆಟ್ಟದ ತಪ್ಪಲನ್ನು ತಲುಪಿ ಮುತ್ತಿಗೆಯನ್ನು ಹಾಕಲಿದ್ದಾರೆ.
ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಮಾದ್ಯಮ ದೊಂದಿಗೆ ಮಾತನಾಡಿ ಈಗಾಗಲೇ ಸ್ಥಾಪಿತವಾದ ವಿಗ್ರಹ ಈ ನಕಲಿಯಾಗಿದ್ದು ಈ ನಕಲಿ ವಿಗ್ರಹ ಬಗ್ಗೆ ಕ್ಷೇತ್ರದ ಜನತೆಗೆ ಮನದಟ್ಟಾಗಿದೆ. ಅದ್ದರಿಂದ ಕೂಡಲೇ ಅಸಲಿ ವಿಗ್ರಹವನ್ನು ಸ್ಥಾಪನೆ ಮಾಡಬೇಕು ಮತ್ತು ಕಾರ್ಕಳ ಜನತೆಯ ಬಳಿ ಕ್ಷಮೆ ಯಾಚ ಬೇಕು. ಮುಂದಿನ ದಿನಗಳಲ್ಲಿ ಅಸಲಿ ವಿಗ್ರಹ ಸ್ಥಾಪನೆ ಹಂತ ಹಂತವಾಗಿ ಕ್ರಮ ಬದ್ದವಾಗಿ ಕಾಮಗಾರಿ ನಡೆಸಲಿ. ಹಾಗೂ ಈಗಾಗಲೇ ಕಾಮಗಾರಿ ಕೈಗೆತ್ತಿಕೊಂಡಿದ್ದು ಅದರ ಗುಣಮಟ್ಟ ಹಾಗೂ ತಾಂತ್ರಿಕತೆಯ ಬಗ್ಗೆ ಎನ್.ಐ.ಟಿ.ಕೆ ಯಿಂದ ಮಾಹಿತಿ ಪಡೆದು ವಿಗ್ರಹ ಅಡಿಪಾಯ ವನ್ನು ಭದ್ರಗೊಳಿಸಬೇಕಾಗಿದೆ.
ಇದೇ ವೇಳೆ ಜಿಲ್ಲಾ ಉಸ್ತವಾರಿ ಸಚಿವರ ಮಾರ್ಗದರ್ಶನ ಪಡೆದು ಹಿರಿಯರ ಸಲಹೆ ಅಭಿಪ್ರಾಯದೊಂದಿಗೆ ಅಸಲಿ ಮೂತಿ ಸ್ಥಾಪನೆ ಮಾಡುವಂತೆ ಈ ಮೂಲಕ ಒತ್ತಾಯಿಸುತ್ತೇನೆ ಎಂದರು.
ಈ ಸಂಧರ್ಭದಲ್ಲಿ ಕಾರ್ಕಳ ಕಾಂಗ್ರೆಸ್ ವಕ್ತಾರ ಶುಭದ ರಾವ್, ಕಾರ್ಕಳ ಪುರಸಭಾ ಮಾಜಿ ಅಧ್ಯಕ್ಷರುಗಳಾದ ಸುಭಿತ್ ಎನ್ ಆರ್, ಪ್ರತಿಮಾ ರಾಣೆ, ಮುಡಾರು ಪಂಚಾಯತ್ ಮಾಜಿ ಅಧ್ಯಕ್ಷ ಅಜಿತ್ ಉಪಸ್ಥಿತರಿದ್ದರು.