ಉಡುಪಿ, ಅ 12 (DaijiworldNews/HR): ಮರಣವನ್ನಪ್ಪಿದ ತನ್ನ ತಾಯಿಯ ಅಂತ್ಯಕ್ರಿಯೆ ನಡೆಸಲು ಅಸಹಾಯಕಳಾಗಿದ್ದ ಮಗಳ ಪರಿಸ್ಥಿತಿಯನ್ನು ಅರಿತ ಸಮಾಜ ಸೇವಕ ವಿಶು ಶೆಟ್ಟಿ ಅವರು ತಾವೇ ಮುಂದಾಗಿ ಅಂತ್ಯಸಂಸ್ಕಾರವನ್ನು ನಡೆಸಿ, ವೆಚ್ಚವನ್ನೂ ಭರಿಸಿ ಮಾನವೀಯತೆ ಮೆರೆದಿದ್ದಾರೆ.
ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ ತಮಿಳುನಾಡಿನ ವೃದ್ಧೆ ಹಠಾತ್ ಮೃತಪಟ್ಟಿದ್ದು, ತಾಯಿಯ ಅಂತ್ಯಕ್ರಿಯೆ ನಡೆಸಲು ಮಗಳು ಅಸಹಾಯಕರಾಗಿ ದು:ಖಿತರಾಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ವಿಶು ಶೆಟ್ಟಿ ಅವರು ವೃದ್ಧೆಯ ಮಗಳಿಗೆ ಸಾಂತ್ವನ ಹೇಳಿ, ಸಾಮಾಜಿಕ ಕಾರ್ಯಕರ್ತ ರಾಮದಾಸ್ ಪಾಲನ್ ಉದ್ಯಾವರ ಅವರ ನೆರವಿನಲ್ಲಿ ಉಡುಪಿಯ ಬೀಡಿನಗುಡ್ಡೆಯ ಸ್ಮಶಾನದಲ್ಲಿ ಗುರುವಾರ ಅಂತ್ಯಕ್ರಿಯೆ ನಡೆಸಿದರು.
ಮಣಿಪಾಲ ಠಾಣೆಯಲ್ಲಿ ಕಾನೂನು ಪ್ರಕ್ರಿಯೆ ನಡೆಸಲಾಯಿತು.