ಮಂಗಳೂರು, ಏ 13(MSP): ನಗರದ ಕೇಂದ್ರ ಮೈದಾನದಲ್ಲಿ ಬಿಜೆಪಿ ಪಕ್ಷದ ಲೋಕಸಭಾ ಚುನಾವಣೆಯ ಪ್ರಚಾರದ ಬೃಹತ್ ಬಹಿರಂಗ ’ಸಂಕಲ್ಪ ಸಮಾವೇಶ ’ ಆರಂಭಗೊಂಡಿದ್ದು ಪ್ರಧಾನಿ " ನಿಮ್ಮ ಚೌಕಿದಾರ್ ನರೇಂದ್ರ ಮೋದಿಯ ನಮಸ್ಕಾರಗಳು " ಎಂದು ಕನ್ನಡದಲ್ಲಿ ಹೇಳಿ ಮಾತು ಆರಂಭಿಸಿದ ಮೋದಿ, ಮರದಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸುವವರನ್ನು ಕೆಳಗಿಳಿಯುವಂತೆ ವಿನಂತಿಸಿದರು. ನಿಮ್ಮ ಸುರಕ್ಷತೆ ನಮಗೆ ಮುಖ್ಯ ಎಂದು ವಿನಂತಿಸಿ ಬಳಿಕ ಮಾತು ಆರಂಭಿಸಿದರು.
ಧಾರ್ಮಿಕ ಕೇಂದ್ರಗಳ ಪಾವನ ಭೂಮಿಗೆ ನಮಿಸುತ್ತೇನೆ. ಇಂದು ನೀವು ಸಾಗರದ ಅಲೆಗಳಂತೆ ಇಲ್ಲಿ ಸೇರಿದ್ದೇನೆ. ಮಂಗಳೂರು ವಿಮಾನ ನಿಲ್ದಾಣದಿಂದ ಇಲ್ಲಿವರೆಗೆ ರಸ್ತೆ ಮಾರ್ಗವಾಗಿ ಇಲ್ಲಿಗೆ ಬಂದಾಗ ರಸ್ತೆ ಬದಿಗಳಲ್ಲಿ ಮಾನವ ಗೋಡೆ ನಿರ್ಮಾಣವಾಗಿತ್ತು. ಲಕ್ಷಾಂತರ ಜನ ಇಲ್ಲಿ ಸೇರಿರುವುದನ್ನು ಕಂಡು ನಾನು ಪುಳಕಿತನಾಗಿದ್ದೇನೆ.
ಈ ಬಾರಿಯ ಚುನಾವಣೆ ಕೇವಲ ಸರ್ಕಾರ ರಚಿಸಲು ಅಲ್ಲ. ಇದು ಭಾರತದ ಪುನರ್ ಸೃಷ್ಟಿಗಾಗಿ ನಡೆಯುವ ಚುನಾವಣೆಯಾಗಿದೆ. ಇನ್ನು ವಿಪಕ್ಷಗಳಾದ ಕಾಂಗ್ರೆಸ್- ಜೆಡಿಎಸ್ ಕುಟುಂಬ ರಾಜಕಾರಣಕ್ಕೆ ಮಾತ್ರ ಸೀಮಿತವಾಗಿದೆ. ನಾವು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮೇಲೆತ್ತಲು ಪ್ರಯತ್ನಿಸುತ್ತೇವೆ. ಆದರೆ ಕಾಂಗ್ರೆಸ್ - ಜೆಡಿಎಸ್ ಪರಿವಾರ ರಾಜಕೀಯವಾಗಿದೆ. ವಿಪಕ್ಷಗಳಿದ್ದು ವಂಶೋದಯ ರಾಜಕೀಯವಾಗಿದ್ದು, ಅವರ ಪಾರ್ಟಿಯ ಉದ್ದಾರಕ್ಕಾಗಿ, ಮನೆತನದ ಉದ್ದಾರಕ್ಕಾಗಿ, ದಳ್ಳಾಳಿಗಳ ಹಿತ ಅವರ ಅಲೋಚನೆಯಾಗಿದೆ.
ಆದರೆ ಭಾರತೀಯ ಜನತಾ ಪಾರ್ಟಿಯ ಅಂತ್ಯೋದಯ ಚಿಂತನೆ ಚಾಯಿವಾಲನನ್ನು ಕೂಡಾ ಪ್ರಧಾನಿ ಮಾಡುತ್ತದೆ. ಪ್ರಮಾಣಿಕತೆ, ಭ್ರಷ್ಟಚಾರ ರಹಿತ, ಬಡತನವನ್ನು ನಿರ್ಮೂಲನೆ ಮಾಡುವ ಸಬ್ ಕೀ ಸಾಥ್ ಸಬ್ ಕೀ ವಿಕಾಸ್ ಯೋಚನೆಯಾಗಿದೆ ಎಂದರು.