ಮಂಗಳೂರು, ಅ 12 (DaijiworldNews/HR): ಜನತಾದಳದ ನಾಯಕಿ ಜಯಲಕ್ಷ್ಮೀ ಹೆಗ್ಡೆ ಅಡ್ಯಾರ್ ಅವರು ನಿಧನರಾಗಿದ್ದಾರೆ.
ಸಣ್ಣ ವಯಸ್ಸಿನಿಂದಲೇ ಸೇನಾ ಮನೋಭಾವನೆ ಹೊಂದಿದ್ದ ಜಯಲಕ್ಷ್ಮೀ ಹೆಗ್ಡೆ ಅವರು ಸುಮಾರು 40 ವರ್ಷಗಳಷ್ಟು ಕಾಲ ಅಡ್ಯಾರು ಮಹಿಳಾ ಮಂಡಲಿಯ ಅಧ್ಯಕ್ಷರಾಗಿ, ಜನತಾದಳದ ಮಹಿಳಾ ವಿಂಗ್ಸ್ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಬಂಟರೆ ಯಾನೆ ನಾಡವರ ಮಾತ್ರೆ ಸಂಘದ ಕಾರ್ಯಕಾರಿ ಸಮಿತಿಯ ಮುಖ್ಯ ಕಾರ್ಯಕರ್ತೆಯಾಗಿಯೂ ಹಾಗೂ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು ಅಡ್ಯಾರು ಗ್ರಾಮ ಪಂಚಾಯಿತಿನಲ್ಲಿ ಆಯ್ಕೆಯಾಗಿ 10 ವರ್ಷಗಳ ಕಾಲ ಹಾಗೂ ಐದು ವರ್ಷಗಳ ಕಾಲ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಕರ್ನಾಟಕ ರಾಜ್ಯ ಸರ್ಕಾರ ಸಲಹಾ ಮಂಡಳಿಯ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು. ಅಡ್ಯಾರು ಪ್ರಾರ್ಥಮಿಕ ಆರೋಗ್ಯ ಕೇಂದ್ರದಲ್ಲಿ ಅಧ್ಯಕ್ಷರಾಗಿಯೂ ಪ್ರಜ್ಞ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು ಇದರ ಅಲ್ಪಾವಧಿ ವಸತಿ ಗ್ರಹದ ಕಮಿಟಿ ಸದಸ್ಯೆಯಾಗಿ, ಶಿಶು ಪಾಲನ ಕೇಂದ್ರ ದಕ್ಷಿಣ ಕನ್ನಡ ಜಿಲ್ಲೆ ಇದರ ಉಪಾಧ್ಯಕ್ಷರಾಗಿ ಸಲ್ಲಿಸಿದ್ದ ಅವರು, ಅಂಗನವಾಡಿ ಕೇಂದ್ರ ಕಣ್ಣೂರು ಅಡ್ಯಾರು ಅರ್ಕಲಗಳಲ್ಲಿ ಸ್ಥಾಪಿಸಲು ಕಾರಣಕರ್ತರಾಗಿದ್ದರು.
ಮೃತರು ಮೂವರು ಗಂಡು ಮಕ್ಕಳು, ಓರ್ವ ಮಗಳು, ಮೊಮ್ಮಕ್ಕಳು ಹಾಗೂ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.