ಉಡುಪಿ, ಅ 10 (DaijiworldNews/MS): ಉಡುಪಿ ಬಾರ್ಕೂರು ಬೆಣ್ಣೆ ಕುದುರು ನಿವಾಸಿ. ಜಯ ಬಂಗೇರ( 59 ವರ್ಷ)ಅವರು ಮಲ್ಪೆಯಲ್ಲಿ ಮೀನುಗಾರಿಕೆ ನಡೆಸುತ್ತಿರುವಾಗ ತೀವ್ರ ಎದೆ ನೋವು ಕಂಡುಬಂದುದ್ದರಿಂದ ಅವರನ್ನು ತಕ್ಷಣ ಮಣಿಪಾಲದ ಆಸ್ಪತ್ರೆಗೆ ತಕ್ಷಣ ಸೇರಿಸಿದರೂ ಹೃದಯಘಾತದಿಂದ ಅಕ್ಟೋಬರ್9 ಸೋಮವಾರ ಸಂಜೆ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾದರು ಮೃತರಿಗೆ ಪತ್ನಿ ,ಪುತ್ರಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಮೃತರು ಜೀವ ರಕ್ಷಕರಾಗಿದ್ದು. ಈ ಹಿಂದೆ ಸ್ಥಳೀಯವಾಗಿ ಬಾವಿಗೆ ಬಿದ್ದವರನ್ನು ರಕ್ಷಣೆ ಮಾಡಿಜೀವ ರಕ್ಷಕರೆಂದು ಗುರುತಿಸಿಕೊಂಡಿದ್ದಾರೆ. ಬಾರ್ಕೂರು ಬೆಣ್ಣೆಕುದುರು ಮೊಗವೀರ ಗ್ರಾಮ ಸಭೆಯ ಈ ಹಿಂದೆ ಅಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದ್ದರು. ಮೀನುಗಾರಿಕೆ ವೃತ್ತಿ ನಡೆಸುತ್ತಿದ್ದ ಅವರು ಮಳೆಗಾಲದಲ್ಲಿ ಹೊಳೆಯಲ್ಲಿ ಬಿದ್ದ ಅನಾಥ ಶವ ಮೇಲೆತ್ತುವುದರಲ್ಲಿ ಆ ಭಾಗದಲ್ಲಿ ಸೈ ಎನಿಸಿಕೊಂಡಿದ್ದರು . ಸ್ಥಳೀಯವಾಗಿ ಗಣಪತಿಯ ವಿಗ್ರಹ ಜನಸ್ತಂಬನದಲ್ಲಿಯೂ ಕೂಡ ತಮ್ಮಕಾರ್ಯ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸುತ್ತಿದ್ದರು.. ಬಾರ್ಕೂರು ಕುಲಮಾಹಾಸ್ತ್ರಿ ಅಮ್ಮನವರ ದೇವಸ್ಥಾನದ ಹೊಳೆಯಾಯನದಲ್ಲಿಯೂ ಸಕ್ರಿಯವಾಗಿ ದೋಣಿ ಚಲಾಯಿಸುವುದರಲ್ಲಿ ಸಕ್ರಿಯರಾಗಿದ್ದರು.