ಉಡುಪಿ, ಅ 10 (DaijiworldNews/AK):ಯುದ್ದಪೀಡಿತ ಇಸ್ರೇಲ್ ನಲ್ಲಿ ಜಿಲ್ಲೆಯ 30 ಕ್ಕೂ ಅಧಿಕ ಮಂದಿಕೇರ್ ಟೇಕರ್, ಹೋಂ ನರ್ಸ್ ಕೆಲಸಗಳಿಗಾಗಿ ತೆರಳಿರುವ ಜಿಲ್ಲೆಯ ವಿವಿಧ ಭಾಗದ ನಿವಾಸಿಗಳು ಬಗ್ಗೆ ಮಾಹಿತಿ ಜಿಲ್ಲಾಡಳಿತಕ್ಕೆ ಲಭ್ಯವಾಗಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಟ್ರೋಲ್ ರೂಂ ಸ್ಥಾಪನೆ ಮಾಡಲಾಗಿದ್ದು, ಸಂಬಂಧಪಟ್ಟ ಭಾರತದ ಪ್ರಜೆಗಳಿದ್ದಲ್ಲಿ, ಅವರ ಬಗ್ಗೆ ಮಾಹಿತಿಯನ್ನು ಜಿಲ್ಲಾಧಿಕಾರಿಯವರ ಕಚೇರಿಗೆ ನೀಡಲು ಸೂಚನೆ ನೀಡಲಾಗಿದೆ.
ರಜತಾದ್ರಿ ಮಣಿಪಾಲದಲ್ಲಿ ತೆರೆದಿರುವ ಕಂಟ್ರೋಲ್ ರೂಂ, ಸಂಖ್ಯೆ: 1077/ 0820-2574802 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.
ರಾಜ್ಯ ಸರಕಾರದ ತುರ್ತು ಸಂಖ್ಯೆ: 080-22340676, 080-22253707 ಕೂಡಾ ಮಾಹಿತಿ ನೀಡಬಹುದು. ಇನ್ನೂ ಹಲವಾರು ಮಂದಿ ಉಡುಪಿ ಮೂಲದವರು ಇಸ್ರೇಲ್ ನಲ್ಲಿ ಇರುವ ಮಾಹಿತಿ ಸಿಕ್ಕಿದೆ. ಇವರೆಲ್ಲರ ಮಾಹಿತಿ ಸಂಗ್ರಹಿಸಿ ರಾಜ್ಯ ಸರಕಾರಕ್ಕೆ ಜಿಲ್ಲಾಡಳಿತ ಒದಗಿಸಲಿದೆ.