ಉಡುಪಿ,ಅ 07 (DaijiworldNews/AK) :ವಿಶ್ವಹಿಂದೂ ಪರಿಷತ್ತಿನ 60 ನೇ ವರ್ಷಾಚರಣೆಯ ಹಿನ್ನಲೆಯಲ್ಲಿ ನಡೆಯುತ್ತಿರು ಶೌರ್ಯ ಜಾಗರಣಾ ರಥ ಯಾತ್ರೆಯು ಅಕ್ಟೋಬರ್ 10 ರಂದು ಉಡುಪಿ ತಲುಪಲಿದ್ದು ಅಂದು ಎಂಜಿಎಂ ಮೈದಾನದಲ್ಲಿ ಬೃಹತ್ ಹಿಂದೂ ಸಮಾಜೋತ್ಸವ ನಡೆಯಲಿದೆ” ಎಂದು ಬಜರಂಗದಳ ಸಂಯೋಜಕ ಸುನಿಲ್ ಕೆ ಆರ್ ತಿಳಿಸಿದ್ದಾರೆ.
ಈ ಕುರಿತು ನಡೆದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಅಕ್ಟೋಬರ್ 10 ರಂದು ಮದ್ಯಾಹ್ನ 2 ಗಂಟೆಗೆ ಹೆಜಮಾಡಿಯಿಂದ ಶೌರ್ಯ ಜಾಗರಣ ರಥವನ್ನು ಭವ್ಯವಾಗಿ ಸ್ವಾಗತಿಸಲಿದ್ದೇವೆ. ಮಧ್ಯಾಹ್ನ 03 ಗಂಟೆಗೆ ಉಡುಪಿಯ ಜೊಡು ಕಟ್ಟೆಯಿಂದ ಶೌರ್ಯ ಜಾಗರಣ ರಥದ ಬೃಹತ್ ಶೋಭಾಯಾತ್ರೆ ನಡೆಯಲಿದ್ದು, ಈ ಶೋಭಾಯಾತ್ರೆಯಲ್ಲಿ ನಮ್ಮ ದೇಶ, ಧರ್ಮಕೋಸ್ಕರ ಹುತಾತ್ಮರಾದ, ಬಲಿದಾನಾಗೈದ ಮಹಾಪುರಷರ ಸ್ತಬ್ಧ ಚಿತ್ರಗಳೊಂದಿಗೆ, ಚಂಡೆ, ಕೊಂಬು ವಾದ್ಯಗಳೊಂದಿಗೆ ಅದ್ಧೂರಿ ಶೋಭಾಯಾತ್ರೆ ನಡೆಯಲಿದ್ದು, ಈ ಶೋಭಾಯಾತ್ರೆಗೆ ಕರ್ನಾಟಕ ಸರಕಾರದ ಮಾಜಿ ಸಚಿವರು ಪ್ರಮೋದ್ ಮಧ್ವರಾಜ್ ಮತ್ತು ಉದ್ಯಮಿ ಕಡ್ತಲ ವಿಶ್ವನಾಥ್ ಪೂಜಾರಿ ಚಾಲನೆ ನೀಡಲಿದ್ದಾರೆ.
ಸಂಜೆ 4:00 ಕ್ಕೆ ಎಂಜಿಎಂ ಮೈದಾನದಲ್ಲಿ ಬೃಹತ್ ಹಿಂದೂ ಸಮಾಜೋತ್ಸವ ನಡೆಯಲಿದೆ, ಮನೋಹರ್ ಶೆಟ್ಟಿ ಸಾಯಿರಾದ ಗ್ರೂಪ್ ಉಡುಪಿ ಇವರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಲಿದ್ದು, ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಪೇಜಾವರ ಮಠ, ಈಶ ಪ್ರಿಯ ತೀರ್ಥ ಶ್ರೀ ಅದಮಾರು ಮಠ, ಮಹಾಮಹಾಮಂಡಲೇಶ್ವರ ಅಖಿಲೇಶ್ವರಾನಂದ ಗಿರಿ ಮಹಾರಾಜ್, ಭೋಪಾಲ್ ಮಧ್ಯಪ್ರದೇಶ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ, ವಿಶ್ವ ಹಿಂದೂ ಪರಿಷದ್ ದಕ್ಷಿಣ ಪ್ರಾಂತದ ಕಾರ್ಯಧ್ಯಕ್ಷರು ಎಂ ಬಿ. ಪುರಾಣಿಕ್, ಸೂರ್ಯನಾರಾಯಣ ರಾಷ್ಟ್ರೀಯ ಸಹ ಸಂಯೋಜಕರು, ಬಜರಂಗದಳ ಸುನಿಲ್ ಕೆ ಆರ್ ಸಂಯೋಜಕರು ಭಜರಂಗದಳ ದಕ್ಷಿಣ ಪ್ರಾಂತ ರವರ ಹಾಗೂ, ಪ್ರಮುಖರ ಉಪಸ್ಥಿತಿಯಲ್ಲಿ ನೆರವೇರಲಿದೆ.
ಈ ಬೃಹತ್ ಹಿಂದೂ ಸಮಾಜೋತ್ಸವದಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಮಂದಿ ಹಿಂದೂ ಬಾಂಧವರು ಸೇರುವ ನಿರೀಕ್ಷೆ ಇದೆ. ” ಎಂದರು.
ಪತ್ರಿಕಾಗೋಷ್ಟಿಯಲ್ಲಿ ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ, ಸಹ ಪಾಧ್ಯಕ್ಷ ಅಶೋಕ್, ಬಜರಂಗದಳ ಜಿಲ್ಲಾ ಸಂಯೋಜಕ ಚೇತನ್ ಪೇರಲ್ಕ ಮತ್ತು ಇತರರು ಉಪಸ್ಥಿತರಿದ್ದರು.