ಸುಳ್ಯ,ಅ 07 (DaijiworldNews/AK) :ಕುರುಂಜಿಭಾಗ್ ನಲ್ಲಿರುವ ಪಾಲಿಟೆಕ್ನಿಕ್ ಕಾಲೇಜಿಗೆ ಕೆಲವರು ಅಕ್ರಮ ಪ್ರವೇಶ ಮಾಡಿ ಅಲ್ಲಿನ ಪ್ರಾಂಶುಪಾಲರು ಹಾಗೂ ಸಿಬ್ಬಂದಿಯವರಿಗೆ ಬೆದರಿಕೆ ಹಾಕಿದ್ದಾರೆಡಾ.ಜ್ಯೋತಿ ರೇಣುಕಾಪ್ರಸಾದ್ ರವರು ಪೋಲೀಸರಿಗೆ ದೂರು ನೀಡಿದ್ದು, ಕೇಸು ದಾಖಲಿಸಿದ್ದಾರೆ.
ಡಾ| ಜ್ಯೋತಿ ರೇಣುಕಾಪ್ರಸಾದ್ ನೀಡಿದ ದೂರಿನಂತೆ ಐಪಿಸಿ ಕಲಂ 448, 506 ಜೊತೆಗೆ 34 ಯಂತೆ ಪ್ರಕರಣ ದಾಖಲಾಗಿದೆ.ದೂರುದಾರರ ಬಾವ ಡಾ ಚಿದಾನಂದ, ಅವರ ಹೆಂಡತಿ ಶೋಭಾ ಚಿದಾನಂದ, ಮಗ ಅಕ್ಷಯ್ ಕೆ ಸಿ, ಮಗಳು ಡಾ| ಐಶ್ವರ್ಯ ,ಸಂಬಂಧಿ ಹೇಮನಾಥ ಕೆ.ವಿ, ಜಗದೀಶ್ ಅಡ್ತಲೆ ಮತ್ತು ಇತರ ಕೆಲವರು ಅಕ್ರಮ ಪ್ರವೇಶ ಮಾಡಿದವರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸೆ. 6 ರಂದು ಡಾ. ಜ್ಯೋತಿ ಆರ್. ಪ್ರಸಾದ್ ಅವರು ಮಂಗಳೂರಿಗೆ ಹೋಗಿದ್ದು ಈ ವೇಳೆ ಕುರುಂಜಿಬಾಗ್ನಲ್ಲಿರುವ ಪಾಲಿಟೆಕ್ನಿಕ್ ಕಾಲೇಜಿಗೆ ಅಕ್ರಮ ಪ್ರವೇಶ ಮಾಡಿರುವುದಾಗಿಯೂ ಅಲ್ಲಿದ್ದ ಪ್ರಾಂಶುಪಾಲರು ಹಾಗೂ ಸಿಬ್ಬಂದಿಯವರ ಮೊಬೈಲ್ಗಳನ್ನು ಕೇಳಿ ಪಡೆದು, ಸಿ ಸಿ ಕ್ಯಾಮರಗಳ ಮತ್ತು ಇತರ ಮಾಹಿತಿ ಪಡೆದು, ಮೊಬೈಲ್ಗಳನ್ನು ಹಿಂತಿರುಗಿಸಿ, ಬೆದರಿಸಿದ್ದಾರೆ ಎಂದು ಡಾ.ಜ್ಯೋತಿಯವರು ದೂರಿನಲ್ಲಿ ಆರೋಪಿಸಿದ್ದಾರೆ.
ಮಾಹಿತಿ ತಿಳಿದ ತಾನು ತಕ್ಷಣ ಗಾಬರಿಯಾಗಿ ಮಂಗಳೂರಿನಿಂದ ಸುಳ್ಯದ ಸಂಸ್ಥೆಗೆ ಬಂದಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.ಈ ಹಿನ್ನಲ್ಲೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ: 115/2023 ಕಲಂ : 448, 506 ಹಾಗೂ 34 ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.