ಕಾಸರಗೋಡು, ಅ 06 (DaijiworldNews/HR): ಕೆಎಸ್ಆರ್ಟಿಸಿ ಬಸ್ಸುಗಳ ಸೇವೆ ಎಲ್ಲಾ ಹಳ್ಳಿಗಳಿಗೂ ತಲುಪಿಸುವ ಗುರಿ ರಾಜ್ಯ ಸರಕಾರ ಹೊಂದಿದೆ ಎಂದು ಕೇರಳ ಸಾರಿಗೆ ಸಚಿವ ಆಂಟನಿ ರಾಜು ಹೇಳಿದರು.
ಶುಕ್ರವಾರ ಕುಂಬಳೆಯಲ್ಲಿ ಜಿಲ್ಲೆಯ ಮೊದಲ ಗ್ರಾಮ ವಂಡಿ ( ಗ್ರಾಮೀಣ ವಾಹನ)ಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಎಲ್ಲರಿಗೂ ಈ ಪ್ರಯಾಣ ಸೇವೆ ಲಭಿಸಬೇಕಿದೆ. ಗ್ರಾಮೀಣ ಪ್ರದೇಶದ ಪ್ರಯಾಣ ಸಮಸ್ಯೆ.ಪರಿಹರಿಸಲು ಕುಂಬಳೆ ಗ್ರಾಮ ಪಂಚಾಯತ್ ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮ ಜಂಟಿಯಾಗಿ ಗ್ರಾಮ ವಂಡಿ ಯೋಜನೆ ಜಾರಿಗೆ ತರಲಾಗಿದೆ ಎಂದರು.
ಮಂಗಳೂರಿನ ವಿವಿಧ ಕಾಲೇಜುಗಳಿಗೆ ಶಿಕ್ಷಣಕ್ಕೆ ತೆರಳುತ್ತಿರುವ ಜಿಲ್ಲೆಯ ವಿದ್ಯಾರ್ಥಿಗಳಿಗೆ ಕೆ ಎಸ್ ಆರ್ ಟಿ ಸಿ ಬಸ್ಸುಗಳಲ್ಲಿ ರಿಯಾಯಿತಿ ದರ ನೀಡಬೇಕೆಂಬುದು ಹಲವು ಸಮಯದ ಕನಸಾಗಿತ್ತು. ಈ ಕನಸು ಈಡೇರಿಸಲಾಗಿದೆ ಎಂದಿದ್ದಾರೆ.
ಎ.ಐ ಕ್ಯಾಮಾರ ಅಳವಡಿಕೆ ಸಂದರ್ಭದಲ್ಲಿ ಹಲವು ವಿರೋಧಗಳು ಕಂಡು ಬಂದಿತ್ತು. ಕ್ಯಾಮಾರ ಅಳವಡಿಕೆ ಬಳಿಕ ಭನ ಚಾಲನಾ ಉಲ್ಲಂಘನೆ, ಅಪಘಾತಗಳ ಸಂಖ್ಯೆ ಇಳಿಮುಖವಾಗಿದೆ ಎಂದು ಹೇಳಿದರು.
ಶಾಸಕ ಎ ಕೆ. ಎಂ ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಸಿ. ಎ ಸೈಮಾ, ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಸಮೀನಾ ಟೀಚರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕುಂಬಳೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾಸಿರ್ ಮೊಗ್ರಾಲ್, ಬ್ಲಾಕ್ ಪಂಚಾಯತ್ ಸದಸ್ಯ ಅಶ್ರಫ್ ಕಾರ್ಲ, ಜಿಲ್ಲಾ ಪಂಚಾಯತ್ ಸದಸ್ಯೆ ಜಮೀಲಾ ಸಿದ್ದೀಕ್, ಪಂಚಾಯತ್ ಸದಸ್ಯ ರಾದ ಅಶ್ರಫ್ ಕಾರ್ಲ, ಪ್ರೇಮ ಶೆಟ್ಟಿ, ನಾಸಿರ್, ಪಂಚಾಯತ್ ಸದಸ್ಯ ರಾದ ಎಂ ಸಬೂರಾ, ನಸೀಮಾ ಖಾಲಿದ್, ಬಿ. ಎ ರಹಮಾನ್, ಅನ್ವರ್ ಹುಸೈನ್, ಕೆ.ಮೋಹನ್, ಯೂಸಫ್ ಉಳುವಾರ್, ಪುಷ್ಪಲತಾ ಶೆಟ್ಟಿ, ವಿವಿಧ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಮುಖಂಡರು, ಕೆ ಎಸ್ ಆರ್ ಟಿಸಿ ಅಧಿಕಾರಿಗಳಾದ ಜಿ.ಪಿ ಪ್ರದೀಪ್ ಕುಮಾರ್, ವಿ.ಮನೋಜ್ ಕುಮಾರ್, ಕೆ.. ಪ್ರಿಯೇಶ್ ಕುಮಾರ್, ಮೋಹನ್ ಕುಮಾರ್, ಬಿಜು ಮೋನ್, ಸಿ.ಎಚ್ ಹರೀಶ್ ಕುಮಾರ್, ಕುಂಬಳೆ ಪಂಚಾಯತ್ ಕಾರ್ಯದರ್ಶಿ ವೀರಾಜ್ ತಂಬೂರಾನ್,ಅಶ್ರಫ್ ಕೊಡ್ಯಮ್ಮೆ ಮೊದಲಾದವರು ಉಪಸ್ಥಿತ ರಿದ್ದರು. ಪಂಚಾಯತ್ ಅಧ್ಯಕ್ಷೆ ಯು. ಪಿ ತಾಯಿರಾ ಯೂಸಫ್ ಸ್ವಾಗತಿಸಿ, ಗ್ರಾಮ ವಂಡಿ ವಿಶೇಷ ಅಧಿಕಾರಿ ವಿ.ಎಂ ತಾಜುದ್ದೀನ್ ವಂದಿಸಿದರು.