ಮಂಗಳೂರು, 05 (DaijiworldNews/AK): ಪೊಲೀಸ್ ಅಂದಾಗ ಭಯ ಪಡುವ ದೃಷ್ಟಿಕೋನ ಮಕ್ಕಳಲ್ಲಿ ದೂರ ಅಗಬೇಕಿದೆ. ಈ ಕಲ್ಪನೆಯನ್ನು ದೂರ ಮಾಡಬೇಕಾದರೆ ಪೊಲೀಸ್ ಠಾಣೆಯಲ್ಲಿ ಕೆಲಕಾಲ ಮಕ್ಕಳಿಗೆ ಕಳೆಯುವ, ಲವಲವಿಕೆಯ ವಾತಾವರಣವನ್ನು ಕಲ್ಪಿಸಬೇಕಿದೆ. ಅದನ್ನು ಮನಗಂಡ ನಗರದ ‘ಯುರೋಕಿಡ್ಸ್ ಪ್ರಿ-ಸ್ಕೂಲ್’ನವರು ಮಕ್ಕಳನ್ನು ಗುರುವಾರ ನಗರದ ಪೊಲೀಸ್ ಆಯುಕ್ತಾಲಯದ ಕಚೇರಿಗೆ ಕರೆದೊಯ್ದು ಆಯುಕ್ತರ ಜೊತೆ ಮುಕ್ತವಾಗಿ ಬೆರೆಯುವ ಅವಕಾಶ ಕಲ್ಪಿಸಿದರು.
ಪೊಲೀಸ್ ಠಾಣೆಯಲ್ಲಿ ಕೆಲವು ಗಂಟೆಗಳ ಕಾಲ ಕಳೆದ ಮಕ್ಕಳು ಲವಲವಿಕೆಯಿಂದ ಕೂಡಿದ ವಾತಾವರಣವನ್ನು ಕಲ್ಪಿಸುವಲ್ಲಿ ನಿರತರಾದರು. ಪೊಲೀಸ್ ಅಂದರೆ ಮಕ್ಕಳ ಮನಸ್ಸಿನಲ್ಲಿ ಮೂಡುವ ಭಾವನೆಗಳು ಬೇರೆ ಬೇರೆಯ ಪ್ರಶ್ನೆಗಳು ಮೂಡಿಬರುವುದು ಬಹಳಷ್ಟಿದೆ. ಹೀಗಾಗಿ ಮಕ್ಕಳಲ್ಲಿ ಪೊಲೀಸ್ ಅಂದಾಗ ಭಯ ಪಡುವ ದೃಷ್ಟಿಕೋನ ದೂರ ಅಗಬೇಕಿದೆ. ಈ ನಿಟ್ಟಿನಲ್ಲಿ ಮಕ್ಕಳ ಜತೆ ಒಂದಷ್ಟು ಹೊತ್ತು ಪೊಲೀಸ್ ಅಯುಕ್ತರಾದ ಅನುಪಮ್ ಅಗರ್ವಾಲ್ ಕಾಲ ಕಳೆದರು.
ಕಛೇರಿಯಲ್ಲಿ ಸುತ್ತ ಮುತ್ತ ಕುಳಿತುಕೊಂಡು ಪುಟಾಣಿಗಳು ಪೊಲೀಸ್ ಆಯುಕ್ತರಿಗೆ ಪ್ರಶ್ನೆಗಳ ಸುರಿಮಳೆಗೈದರು. ಮಕ್ಕಳ ಪ್ರಶ್ನೆಗೆ ಉತ್ತರಿಸುತ್ತಾ ಕಮೀಷನರ್ ಒಂದು ಕ್ಷಣ ಮಾಸ್ಟರ್ ಆದರು. ಇನ್ನು ಕೆಲವು ಮಕ್ಕಳಿಗೆ ಕಮಿಷನರ್ ಪ್ರಶ್ನೆ ಹಾಕಿದರು ಕೆಲವು ಮಕ್ಕಳು ಟೀಚರ್ ಇಷ್ಟ ಅಂದ್ರು, ಇನ್ನು ಕೆಲ ಮಕ್ಕಳು ನಿಮ್ಮ ಥರ ಪೊಲೀಸ್ ಅಗಬೇಕು ಎಂದು ಉತ್ತರಿಸಿದರು.
ಬಳಿಕ ಮಕ್ಕಳಿಗೆ ಚಾಕಲೇಟ್,ಜ್ಯೂಸ್ ,ಪೆನ್ಸಿಲ್ ನ್ನು ನೀಡಿದರು ಮಕ್ಕಳು ಬಹಳ ಖುಷಿ ಪಟ್ಟರು.ಇತ್ತ ಕಮಿಷನರ್ ಕೂಡ ಕಾನೂನು ಸುವ್ಯವಸ್ಥೆಯ ಒತ್ತಡ ನಡುವೆ ಒಂದೊತ್ತು ಖುಪಿ ಖುಷಿಯಾಗಿ ಮಕ್ಕಳೊಂದಿಗೆ ಕಾಲ ಕಳೆದು ಆನಂದಿಸಿದರು.ಈ ವೇಳೆ ಕಮೀಷನರ್ ಮಾತನಾಡಿ ಮಕ್ಕಳೊಂದಿಗೆ ನಾನು ಮಕ್ಕಳಾಗಿ ಬಿಟ್ಟೇ ಎಂದು ಸಂತಸ ವ್ಯಕ್ತಪಡಿಸಿದರು.